ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್(ಟಿಎಂಸಿ) ರಾಜಕೀಯವಾಗಿ ಅಸ್ಥಿರವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಿಬಿಐನ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಅತಂತ್ರ ಸ್ಥಿತಿಯಲ್ಲಿದ್ದು, ರಾಜಕೀಯವಾಗಿ ತನ್ನ ಅಸ್ಥಿರತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ.
ಹಾಗಾಗಿ, ಕೇಂದ್ರ ಸರ್ಕಾರ ಮೇಲೆ ಅಸಂಬಂದ್ಧ ಆರೋಪವನ್ನು ಮಾಡುತ್ತಿದೆ. ಸಿಬಿಐ ನ್ಯಾಯಾಂಗದ ಒಂದು ಅಂಗವಾಗಿದೆ. ಕೇಂದ್ರ ಸರ್ಕಾರ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿಲ್ಲ. ಟಿಎಂಸಿ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೇ ಹೆಚ್ಚಾಗಿ ಹಗರಣಗಳಲ್ಲಿ ಭಾಗಿಯಾಗಿರುವುದು. ಹೇಳಬೇಕಾದರೆ, ಹಗರಣಕ್ಕೆ ತೃಣಮೂಲಕ ಕಾಂಗ್ರೆಸ್ ತಾಯಿಯಂತಿದೆ. ಶಾರದ ಹಗರಣದಲ್ಲಿ ಈ ಪಕ್ಷದವರು ಕೊಳ್ಳೆ ಹೊಡೆದಿದ್ದಾರೆ. ಆದರೆ, ಇಂತಹ ಪಕ್ಷ ಬಿಜೆಪಿಯತ್ತ ಬೊಟ್ಟು ಮಾಡುತ್ತಿರುವುದು ವಿಷಾಧನೀಯ ಎಂದು ಅವರು ಹೇಳಿದ್ದಾರೆ.