ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಗುರುವಾರ ಇಳಿಕೆ ಮಾಡಿದೆ.
ಪ್ರತಿ ಸಿಲಿಂಡರ್ ದರವನ್ನು 43.50 ರುಪಾಯಿ ಇಳಿಕೆ ಮಾಡಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ. ಇದಲ್ಲದೆ ವೈಮಾನಿ ಇಂಧನ ದರವನ್ನು ಕಡಿತ ಮಾಡಲಾಗಿದ್ದು, ಶೇ.12.5ರಷ್ಟು ಬೆಳೆ ಇಳಿಕೆ ಮಾಡಲಾಗಿದೆ.
ಪ್ರಸ್ತೂತ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 782.5 ರುಪಾಯಿ ಇದ್ದು, ಇದು 739 ರುಪಾಯಿಗೆ ಇಳಿಯಲಿದೆ. ಕಳೆದ ಆಗಸ್ಟ್ ತಿಂಗಳಿನಿಂದಲೂ ತೈಲೋತ್ಪನಗಳ ಬೆಲೆ ಇಳಿಕೆಯತ್ತ ಮುಖ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.