ದೇಶ

ಕಾರು ವಿಮೆ ನವೀಕರಣದಲ್ಲಿ ಹಣ ಉಳಿತಾಯ

ಕಾರು ಹೊಂದಿದವರು ವಿಮೆ ಮಾಡಿಸಿಕೊಳ್ಳಬೇಕಾದ್ದು ಕಡ್ಡಾಯ. ಅದಕ್ಕಾಗಿಯೇ ಹಲವಾರು ಕಂಪನಿಗಳು ಸ್ಪರ್ಧೆಗೆ ಬಿದ್ದು ವಿಮೆ ಮಾರಾಟ ಮಾಡುತ್ತವೆ. ಆದರೆ, ವಿಮೆ ನವೀಕರಣ ಮಾಡುವಾಗ ಪಾಲಿಸಿದಾರರು ಎಚ್ಚರ ತಪ್ಪಬಾರದು. ವಿವಿಧ ಅಂಶಗಳನ್ನು ಗಮನಿಸುತ್ತಾ ಮುಂದಿನ ಹೆಜ್ಜೆ ಇಟ್ಟರೆ ಹಣ ಉಳಿತಾಯ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಹೋಲಿಕೆ ಮಾಡಿ
ಬಹುತೇಕ ಕಾರು ವಿಮೆ ಪಾಲಿಸಿದಾರರು, ತಾವು ಹೊಂದಿರುವ ವಿಮೆಯೇ ಅತ್ಯುತ್ತಮವಾದದ್ದು. ಇದಕ್ಕಿಂತ ಒಳ್ಳೆಯದು ಬೇರೆಯದ್ದು ಇಲ್ಲ ಎಂದೇ ಭಾವಿಸಿಕೊಂಡಿರುತ್ತಾರೆ. ಹಾಗಾಗಿ ಮತ್ತೆ ಅದೇ ಪಾಲಿಸಿ ನವೀಕರಣ ಮಾಡುತ್ತಾರೆ. ಆದರೆ ಇನ್ನು ಹೀಗೆ ಮಾಡದಿರಿ. ಪಾಲಿಸಿ ನವೀಕರಣ ಮಾಡುವ ಮೊದಲು ಆನ್‌ಲೈನ್‌ನಲ್ಲಿ ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿಕೊಳ್ಳಿ. ಬೇರೆ ಪಾಲಿಸಿ ಚೆನ್ನಾಗಿದೆ ಎಂದಿದ್ದರೆ ಅದಕ್ಕೆ ವರ್ಗಾಯಿಸಿಕೊಂಡು ಹಣ ಉಳಿತಾಯ ಮಾಡಿ.
ಆಫರ್‌ಗಳನ್ನು ನೋಡಿ
ನವೀಕರಣಕ್ಕೆ ಮುನ್ನ ವಿಮೆಯ ಫೀಚರ್‌ಗಳನ್ನು ಪುನರ್‌ಪರಿಶೀಲನೆ ಮಾಡಿ. ನಿಮಗೆ ಏನು ಅಗತ್ಯವಿದೆ, ಯಾವುದು ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಉದಾ: ಯಾವುದಾದರೂ ವಿಶೇಷ ಕಲಂ ಇದ್ದು, ಅದಕ್ಕಾಗಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದ್ದರೆ, ಅದು ನಿಮಗೆ ಅಗತ್ಯವೋ, ಇಲ್ಲವೋ ನೋಡಿ. ಅಗತ್ಯವಿಲ್ಲ ಎಂದಾದರೆ ಅದನ್ನು ಬಿಟ್ಟುಬಿಟ್ಟು, ಹೆಚ್ಚುವರಿ ಶುಲ್ಕವನ್ನು ಉಳಿಸಿ.
ಮೊದಲೇ ನವೀಕರಣ
ಗಡುವು ಮುಗಿಯುವವರೆಗೂ ಕಾದು ನಂತರ ವಿಮೆ ನವೀಕರಣ ಮಾಡುವುದು ಒಳ್ಳೆಯದಲ್ಲ. ಪಾಲಿಸಿ ಲ್ಯಾಪ್ಸ್ ಆಗುವ ದಿನಕ್ಕಿಂತ ಕನಿಷ್ಠ 45 ದಿನಗಳೊಳಗೆ ಮರುನವೀಕರಣ ಮಾಡಿ. ಒಂದು ವೇಳೆ ಗಡುವು ಮುಗಿಯುವ ಅವಧಿಯಲ್ಲಿ ವಿಮೆಯ ಹಣ ಏರಿಕೆಯಾದರೂ, ನೀವು ಹೆಚ್ಚು ಹಣ ಕೊಡಬೇಕಾಗಿರುವುದಿಲ್ಲ.
ನೋ ಕ್ಲೈಮ್ಸ್ ಬೋನಸ್
ಈ ಹಿಂದಿನ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ ಅಂತಹ ವಿಮಾದಾರನಿಗೆ ನೀಡುವ ಬೋನಸ್ ಇದು. ಇಂತಹ ಸೌಲಭ್ಯ ನಿಮಗೂ ಸಿಗಲಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೌದೆಂದಾದರೆ, ಆ ರಿಯಾಯಿತಿ ಮೊತ್ತವನ್ನು ನಿಮ್ಮ ಪ್ರೀಮಿಯಂನಿಂದ ಕಳೆಯಲಾಗುತ್ತದೆ. ನೀವು ಪ್ರಸಕ್ತ ವರ್ಷದಲ್ಲಿ ನೀಡುವ ಪ್ರೀಮಿಯಂ ಮೊತ್ತ ಕಡಿಮೆಯಾಗಿ, ಹಣ ಉಳಿತಾಯವಾಗುತ್ತದೆ.
ಸರಿಯಾಗಿ ಪರಿಶೀಲಿಸಿ
ಪಾಲಿಸಿ ವಿಚಾರಕ್ಕೆ ಬಂದಾಗ ಎಲ್ಲ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿಯೇ ಮುಂದುವರಿಯುವುದು ಸೂಕ್ತ. ಪಾಲಿಸಿಯನ್ನು ಆನ್‌ಲೈನ್ ಮೂಲಕ ನವೀಕರಣ ಮಾಡುವುದಾದರೆ, ಒಂದಕ್ಕಿಂತ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಪಾಲಿಸಿಗಳನ್ನು ಹೋಲಿಕೆ ಮಾಡಿ. ಅಷ್ಟೇ ಅಲ್ಲ, ವಿಮಾ ಕಂಪನಿಯ ವೆಬ್‌ಸೈಟ್‌ನಲ್ಲೇ ಮಾಹಿತಿ ಪಡೆಯಿರಿ. ಆಫ್‌ಲೈನ್‌ನಲ್ಲಿ ನವೀಕರಣ ಮಾಡುವುದಿದ್ದರೆ, ವಿಶ್ವಾಸಾರ್ಹ ಬ್ರೋಕರ್‌ನ ಸಹಾಯ ಪಡೆಯಿರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

SCROLL FOR NEXT