ರಾಜ್ ಠಾಕ್ರೆ 
ದೇಶ

ಎಂ ಎನ್ ಎಸ್ ನಾಯಕರ ರಾಜೀನಾಮೆ ಸ್ವೀಕರಿಸಿದ ರಾಜ್ ಠಾಕ್ರೆ

ಇತ್ತೀಚಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಎಂ ಎನ್ ಎಸ್ ಪಕ್ಷ ದಯನೀಯ ಸೋಲು ಕಂಡ ನಂತರ ...

ಮುಂಬೈ: ಇತ್ತೀಚಿನ ಮಹಾರಾಷ್ಟ್ರ ವಿದಾನಸಭಾ ಚುನಾವಣೆಯಲ್ಲಿ ಎಂ ಎನ್ ಎಸ್ ಪಕ್ಷ ದಯನೀಯ ಸೋಲು ಕಂಡ ನಂತರ ಈಗ ಪಕ್ಷದ ಕೆಲವು ಪ್ರಮುಖ ರಾಜಕೀಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗು ಎಂ ಎನ್ ಎಸ್ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ಅವರೆಲ್ಲರ ರಾಜೀನಾಮೆಗಳನ್ನು ಸ್ವೀಕರಿಸಿದ್ದಾರೆ.

"ನಮ್ಮ ಪಕ್ಷದ ನಾಯಕರು ಕಳುಹಿಸಿದ ಎಲ್ಲ ರಾಜೀನಾಮೆಗಳನ್ನು ಸ್ವೀಕರಿಸಿದ್ದೇನೆ. ಈಗ ನನ್ನ ಬೆಂಬಲಕ್ಕೆ ಯಾರಿದ್ದಾರೆ ಮತ್ತು ಯಾರಿಲ್ಲ ಎಂಬುದು ತಿಳಿದಿದೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಹಿರಿಯ ನಾಯಕರು ಮತ್ತು ಮಾಜಿ ಶಾಸಕರಾದ ಪ್ರವೀಣ್ ದಾರೇಕರ್ ಮತ್ತು ವಸಂತ್ ಗೀತೆ ಅವರು ರಾಜೀನಾಮೆ ನೀಡಿದ ಬಗ್ಗೆ ತಮ್ಮ ಮೌನ ಮುರಿದಿರುವ ರಾಜ್ ಠಾಕ್ರೆ, ಪಕ್ಷದಿಂದ ಹೊರ ಹೋಗುತ್ತಿರುವ ಸದಸ್ಯರ ಮನವೊಲಿಸುವ ಯಾವ ಪ್ರಯತ್ನವನ್ನೂ ರಾಜ್ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ತಾನು ಸ್ಪರ್ಧಿಸದ ೨೮೮ ವಿಧಾನಸಭಾ ಕ್ಷೇತ್ರಗಳಲ್ಲಿ, ಜುನ್ನಾರ್ (ಪುಣೆ) ಕ್ಷೇತ್ರವನ್ನು ಮಾತ್ರ ಎಂ ಎನ್ ಎಸ್ ಗೆದ್ದುಕೊಂಡಿತ್ತು ಹಾಗು ಮತಗಳು ಪಾಲು ೩% ಗೆ ಇಳಿದಿತ್ತು.

೨೦೦೯ ರ ವಿದಾನಸಭಾ ಚುನಾವಣೆಯಲ್ಲಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ೧೩ ಸ್ಥಾನ ಗೆದ್ದುಕೊಂಡಿದ್ದ ಎಂ ಎನ್ ಎಸ್ ೧೧.೮೮ % ವೋಟ್ ಶೇರ್ ಪಡೆದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT