ನವದೆಹಲಿ: ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಮೊದಲೇ ಭಾರತೀಯರಲ್ಲಿ ಬಹುತೇಕರು ವಿದೇಶದಲ್ಲಿ ಇಟ್ಟಿರುವ ಕಪ್ಪುಹಣವನ್ನು ವಾಪಸ್ ಪಡೆದಿದ್ದಾರೆ!
ಸುಪ್ರೀಂಕೋರ್ಟ್‌ಗೆ ಈ ವರ್ಷ ಆಗಸ್ಟ್‌ನಲ್ಲಿ ಎಸ್‌ಐಟಿ ನೀಡಿರುವ ವರದಿಯಲ್ಲಿ ವರದಿಯ ಉಲ್ಲೇಖ ಇದೆ. ಫ್ರಾನ್ಸ್ ಸರ್ಕಾರ ಭಾರತಕ್ಕೆ ನೀಡಿರುವ ಪಟ್ಟಿ ಪ್ರಕಾರ ಎಚ್‌ಎಸ್‌ಬಿಸಿಯ ಬಹುರಾಷ್ಟ್ರೀಯ ಶಾಖೆಯಲ್ಲಿ 628 ಭಾರತೀಯರು ಖಾತೆ ಹೊಂದಿದ್ದಾರೆ. ಅದರಲ್ಲಿ 289 ಖಾತೆಗಳಿಂದ ಈಗಾಗಲೇ ಹಣ ವಾಪಸ್ ಪಡೆಯಲಾಗಿದೆ. ಅಂದರೆ ಅರ್ಧದಷ್ಟು ಮಂದಿ ನೇರ ತೆರಿಗೆಯ ಕೇಂದ್ರೀಯ ಮಂಡಳಿ ಈ ಕುರಿತು ಮಾಹಿತಿ ಸಂಗ್ರಹಿಸುವ ಮೊದಲೇ ಹಣ ವಾಪಸ್ ಪಡೆದಿದ್ದಾರೆ.
ಇನ್ನು ಶೇ. 20ರಷ್ಟು ಖಾತೆಗಳು ಅಂದರೆ 122 ಪ್ರಕರಣಗಳು ಜಂಟಿ ಖಾತೆದಾರರದ್ದು, ಹಾಗಾಗಿ ಉಳಿದ 217 ಪ್ರಕರಣಗಳ ಕುರಿತಷ್ಟೇ ಸದ್ಯ ತನಿಖೆ ನಡೆಸಬಹುದು ಎಂದು ಹೇಳಲಾಗಿದೆ.
ಇವುಗಳಲ್ಲಿ 142 ಪ್ರಕರಣದಲ್ಲಿ ಹುಡುಕಾಟ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವ ಕೆಲಸ ಆಗಿದೆ. 8 ಪ್ರಕರಣಗಳಲ್ಲಿ ಸರ್ವೇ ನಡೆದಿದೆ. 17 ಪ್ರಕರಣಗಳ ಕುರಿತು ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲಾಗಿದೆ. 629ರಲ್ಲಿ 319 ಮಂದಿ ತಾವು ಎಚ್‌ಎಸ್‌ಬಿಸಿಯಲ್ಲಿ ಖಾತೆ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.