ದೇಶ

ಟೇಕ್-ಆಫ್ ವೇಳೆ ಎಮ್ಮೆಗೆ ಡಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ

Vishwanath S

ಸೂರತ್: ಟೇಕ್-ಆಫ್ ವೇಳೆ ಸ್ಪೈಸ್ ಜೆಟ್ ವಿಮಾನ ರನ್ ವೇಯಲ್ಲಿ ಎಮ್ಮೆಗೆ ಡಿಕ್ಕಿ ಹೊಡೆದ ಘಟನೆ ಸೂರತ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಳೆದ ರಾತ್ರಿ 7 ಗಂಟೆ ಸುಮಾರಿನಲ್ಲಿ ಸೂರತ್‌ನಿಂದ ದೆಹಲಿಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ಸಂಸ್ಥೆಗೆ ಸೇರಿದ ವಿಮಾನ ಟೇಕ್-ಆಫ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ವಿಮಾನದ ಇಂಜಿನ್‌ಗೆ ತೀವ್ರ ಹಾನಿ ಆಗಿದೆ. ಎಮ್ಮೆಯೂ ಇಂಜಿನ್‌ಗೆ ಕಚ್ಚಿಕೊಂಡಿತ್ತು ಎಂದು ಸ್ಪೈಸ್ ಜೆಟ್ ಸಂಸ್ಥೆ ಹೇಳಿದೆ.

ಈ ಅವಘಡ ವೇಳೆ ವಿಮಾನದಲ್ಲಿ 140 ಪ್ರಯಾಣಿಕರು ಇದು ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಕೂಡಲೇ ವಿಮಾನದ ಹಾರಟವನ್ನು ಸ್ಥಗಿತಗೊಳಿಸಿ, ಪ್ರಯಾಣಿಕರಿಗೆ ಮತ್ತೊಂದು ವಿಮಾನದ ಮೂಲಕ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ತನಿಖೆಗೆ ಆದೇಶಿಸಿದ್ದಾರೆ.

ವಿಮಾನಗಳ ಸಂಚರಿಸುವ ರನ್ ವೇಗೆ ಎಮ್ಮೆಯೊಂದು ಬಂದಿದೆ ಎಂದರೆ ಭದ್ರತೆಯ ಮಟ್ಟ ಯಾವ ಮಟ್ಟದಲ್ಲಿದೆ ಎಂಬುದು ತಿಳಿಯುತ್ತದೆ. ನಮ್ಮ ವಿಮಾನ ನಿಲ್ದಾಣಗಳು ಎಷ್ಟು ಸುರಕ್ಷಿತ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

SCROLL FOR NEXT