ದೇಶ

ಜಾತಿ ಆಧಾರಿತ ಜನಗಣತಿಯಿಂದ ಸಾಮಾಜಿಕ ನ್ಯಾಯ ಸಾಧ್ಯ: ಕರುಣಾನಿಧಿ

ಚೆನ್ನೈ: ಜಾತಿ ಆಧಾರಿತ ಜನಗಣತಿಯಿಂದ ಸಾಮಾಜಿಕ ನ್ಯಾಯ ಒದಗಿಸಬಹುದು ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಶನಿವಾರ ಹೇಳಿದ್ದಾರೆ.  
ಈ ಸಂಬಂಧ ಸುಪ್ರೀಂಕೋರ್ಟ್ ಆದೇಶ ಸಮಯೋಜಿತ ನಿರ್ಧಾರ ಎಂದು ಕರುಣಾನಿಧಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಯುತ ಹಾಗೂ ಕಾನೂನು ನಿಬಂಧಿತ ಆದೇಶ ನೀಡಿದ್ದು, ಜಾತಿಯಾಧಾರಿತ ಜನಗಣತಿ ನಿರ್ಧಾರದಿಂದ ಜನತೆಗೆ ಸಾಮಾಜಿಕವಾಗಿ ನ್ಯಾಯ ನೀಡಲು ಸಾಧ್ಯ, ಸರ್ಕಾರದ ಕೆಲಸ ಪಡೆಯಲು ಹಾಗೂ ಯೋಜನೆಗಳ ಫಲ ಪಡೆಯಲು ಜಾತಿಯಾಧರಿತ ಜನಗಣತಿ ಅತ್ಯಂತ ಮುಖ್ಯವಾಗಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ್ದಾರೆ.

2010ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಜಾತಿ ಆಧಾರಿತ ಜನಗಣತಿ ಉತ್ತಮ ನಿರ್ಧಾರವಾಗಿದ್ದು, ಜನಪರ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಯಾವುದೇ ರೀತಿಯ ಗಣತಿಯನ್ನು ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

SCROLL FOR NEXT