ನವದೆಹಲಿ: ಮಾಜಿ ಕೇಂದ್ರ ಸಚಿವ ಎಲ್.ಎನ್. ಮಿಶ್ರಾ ಅವರ ಹತ್ಯೆ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ.
ರೈಲ್ವೆ ಖಾತೆ ಮಾಜಿ ಸಚಿವ ಎಲ್.ಎನ್ ಮಿಶ್ರಾ ಅವರ ಹತ್ಯೆ (1975) ವಿಚಾರಣೆ ನಡೆಸಿರುವ ದೆಹಲಿ ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು.
1975ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಎಲ್.ಎನ್ ಮಿಶ್ರಾ ಅವರನ್ನು ಹತ್ಯೆಗೈಯಲಾಗಿತ್ತು. ಕಳೆದ 40 ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆ ಸೆ.12ರಂದು ಅಂತಿಮ ವಾದ-ಪ್ರತಿವಾದದೊಂದಿಗೆ ಮುಕ್ತಾಯವಾಗಿತ್ತು. ಜಿಲ್ಲಾ ನ್ಯಾಯಾಧೀಶ ವಿನೋದ್ ಗೋಯಲ್ ಅವರು ಪ್ರಕರಣದ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದರು.
1975ರ ಜನವರಿ 2ರಂದು ಬಿಹಾರದ ಸಮಷ್ಟಿಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಲ್.ಎನ್.ಮಿಶ್ರಾ ಅವರು ಮರುದಿನ ಸಾವನ್ನಪ್ಪಿದ್ದರು.