ದೇಶ

ಡಿಸೆಂಬರ್ ನಲ್ಲಿ ಜಿಎಸ್‌ಎಲ್‌ವಿ ಮಾರ್ಕ್-3 ಪ್ರಯೋಗಾರ್ಥ ಪರೀಕ್ಷೆ

Lakshmi R

ನವದೆಹಲಿ: ಇಸ್ರೋ ನಿರ್ಮಿತ ಜಿಯೋಸಿಂಕ್ರನೈಸ್ ಎಸ್‌ಎಲ್‌ವಿ ಮಾರ್ಕ್-3 ಉಪಗ್ರಹ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳ ಮಧ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದಾಗಿ ಇಸ್ರೋ ಮುಖ್ಯಸ್ಥ ಕೆ.ರಾಧಕೃಷ್ಣನ್ ತಿಳಿಸಿದ್ದಾರೆ.

ಇನ್ಸಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸೀಸ್ ಸಂಸ್ಥೆ ಆಯೋಜಿಸಿದ್ದ 50ನೇ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ.ರಾಧಕೃಷ್ಣನ್, ಜಿಎಸ್‌ಎಲ್‌ವಿ ಮಾರ್ಕ್-3ರ ಕುರಿತು ಸವಿವರ ಮಾಹಿತಿ ನೀಡಿದರು. ಉಪಗ್ರಹ ಉಡಾವಣಾ ವಾಹನವು ಸುಮಾರು 4ಟನ್ ಭಾರವನ್ನು ಹೊರುವ ಸಾಮಾರ್ಥ್ಯ ಹೊಂದಿದ್ದು, ಬಾಹ್ಯಾಕಾಶದಲ್ಲಿ ಭಾರಿ ಗಾತ್ರದ ಉಪಗ್ರಹ ಉಡಾವಣೆ ಮಾಡುವ ಶಕ್ತಿ ಹೊಂದಿದೆ ಎಂದು ವಿವರಿಸಿದರು.

ಡಿಸೆಂಬರ್ ತಿಂಗಳ ಮಧ್ಯದಲ್ಲಿ ಜಿಯೋಸಿಂಕ್ರನೈಸ್ ಎಸ್‌ಎಲ್‌ವಿ ಮಾರ್ಕ್-3ರ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗುತ್ತದೆ. ಇತರೆ ಉಪಗ್ರಹಗಳಿಗೆ ಹೋಲಿಕೆ ಮಾಡಿದಾಗ, ಜಿಎಸ್‌ಎಲ್‌ವಿ ಮಾರ್ಕ್-3 ಕೊಂಚ ಎತ್ತರದಿಂದ ಕೂಡಿದೆ. 42.4 ಮೀಟರ್ ಎತ್ತರದ ಈ ಉಪಗ್ರಹ ಮೂರು ಹಂತಗಳನ್ನು ಹೊಂದಿದೆ ಎಂದು ವಿವರಿಸಿದರು.

ಈ ಉಪಗ್ರಹದಲ್ಲಿ ಸಂಪೂರ್ಣವಾಗಿ ಸ್ವದೇಶಿಯ ನಿರ್ಮಿತ ಕ್ರಯೋಜೆನಿಕ್ ಇಂಜಿನನ್ನು ಬಳಸಲಾಗಿದೆ. ವಿಶ್ವದಲ್ಲಿ ಕೆಲವೇ ಕೆಲವು ದೇಶಗಳು ಮಾತ್ರ ಈ ತಂತ್ರಜ್ಞಾನ ಹೊಂದಿದ್ದು, ಭಾರತ ವಿಶ್ವದ ಗಮನಸೆಳೆದಿದೆ. ಆದರೆ ಉಡಾವಣಾ ವಾಹನಗಳ ಸಾಮಾರ್ಥ್ಯದಲ್ಲಿ ಮಾತ್ರ ಭಾರತ ಹಿಂದುಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಡಾವಣಾ ವಾಹನಗಳ ಸಾಮರ್ಥ್ಯದ ಪೈಕಿ ಚೀನಾ 5.5 ಟನ್ ಹೊಂದಿದ್ದರೆ, ಯುರೋಪ್ 11 ಟನ್, ಅಮೆರಿಕ 13 ಟನ್, ರಷ್ಯಾ 10 ಟನ್ ಹೊಂದಿದೆ. ಈ ಮಧ್ಯೆ ಇಸ್ರೋ ಭವಿಷ್ಯದಲ್ಲಿ 12 ಟನ್ ಸಾಮಾರ್ಥ್ಯ ಹೊಂದುವ ಮಹತ್ವದ ಗುರಿ ಹೊಂದಿದೆ ಎಂದು ಕೆ.ರಾಧಕೃಷ್ಣನ್ ತಿಳಿಸಿದರು.

2000ದ ಇಸವಿಯಲ್ಲಿ ಪ್ರಾರಂಭಗೊಂಡ  ಜಿಯೋಸಿಂಕ್ರನೈಸ್ ಜಿಎಸ್‌ಎಲ್‌ವಿ ಮಾರ್ಕ್-3 2009-2010ರ ವೇಳೆಗೆ ಉಡಾವಣೆಗೊಳ್ಳುವ ಯೋಜನೆ ಹೊಂದಲಾಗಿತ್ತು. 2010ರಲ್ಲಿ ಜಿಎಸ್‌ಎಲ್‌ವಿ ಮಾರ್ಕ್ 2ರ ವೈಫಲ್ಯತೆ ಹಾಗೂ ಇತರೆ ಕಾರಣಾಂತರಗಳಿಂದಾಗಿ ಜಿಯೋಸಿಂಕ್ರನೈಸ್ ಜಿಎಸ್‌ಎಲ್‌ವಿ ಮಾರ್ಕ್-3 ಉಪಗ್ರಹದ ಉಡಾವಣೆ ವಿಳಂಭವಾಗಿದೆ.

SCROLL FOR NEXT