ದೇಶ

ಪಾಕಿಸ್ತಾನದಲ್ಲಿ ಭೀಕರ ಅಪಘಾತ: 56 ಮಂದಿ ಸಾವು

Vishwanath S

ಕರಾಚಿ: ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಸುಮಾರು 56 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ ಖೈಬರ್-ಪಖ್ತೂನ್‌ಖ್ವಾ ಪ್ರಾಂತ್ಯದಿಂದ ಕರಾಚಿ ಕಡೆಗೆ ಬಸ್ಸು ಚಲಿಸುತ್ತಿತ್ತು. ಸುಕ್ಕೂರ್ ಜಿಲ್ಲೆಯ ಥೇರಿ ಬೈಪಾಸ್ ಬಳಿ ಅದು ಬಸ್ ಟ್ರಕ್‌ಗೆ ಡಿಕ್ಕಿ ಹೊಡಿದಿದೆ. ಅಪಘಾತದಲ್ಲಿ 21 ಮಹಿಳೆ ಮತ್ತು 18 ಮಕ್ಕಳು ಸೇರಿ ಸುಮಾರು 65 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ 15 ಮಂದಿಯನ್ನು ಸುಕ್ಕೂರ್ ಮತ್ತು ಖೈರ್‌ಪುರ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್ ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಸ್ಥಳೀಯ ಮಾಧ್ಯಮಗಳೇ ವ್ಯತಿರಿಕ್ತ ವರದಿಗಳನ್ನು ಪ್ರಸಾರ ಮಾಡಿವೆ. ಅದರಂತೆ ಬಸ್ ಚಾಲಕ ಬೇರೊಂದು ಟ್ರಕನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬದ ಟ್ರಕ್‌ಗೆ ಡಿಕ್ಕಿ ಹೊಡೆಸಿದನೆಂದು ಕೆಲವು ವರದಿಗಳು ಹೇಳಿವೆ.

ಅಧ್ಯಕ್ಷ ಮಮ್‌ನೂನ್ ಹುಸೇನ್ ಮತ್ತು ಸಿಂಧ್ ಪ್ರಾಂತ್ಯದ ಗವರ್ನರ್ ಇಶ್ರತುಲ್ ಇಬಾದ್ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

SCROLL FOR NEXT