ನವದೆಹಲಿ: ಲೋಕಪಾಲ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರಿ ಅಧಿಕಾರಿ ಮಾತ್ರ ಆತನ ಕುಟುಂಬ ಸದಸ್ಯರು ಹೊಂದಿರುವ ಆಸ್ತಿ ವಿವರವನ್ನೂ ಸಲ್ಲಿಸಬೇಕಾಗಿದೆ.
ಕೆಲ ದಿನಗಳ ಹಿಂದೆ ಸರ್ಕಾರಿ ಅಧಿಕಾರಿ ಮಾತ್ರ ಆತನ ಕುಟುಂಬದವರು ಹೊಂದಿರುವ ಆಸ್ತಿ ಮತ್ತು ಸಂಪತ್ತಿನ ವಿವರ ಒದಗಿಸಬೇಕಾಗಿಲ್ಲ. ಈ ಬಗ್ಗೆ ಕೇಂದ್ರ ಲೋಕಪಾಲ ಕಾಯ್ದೆಗೆ ತಿದ್ದುಪಡಿ ತರಲಿದೆ ಎನ್ನಲಾಗಿತ್ತು.
ಆದರೆ ಮಂಗಳವಾರ ಸ್ಪಷ್ಟೀಕರಣ ನೀಡಿದ್ದು ಅಧಿಕಾರಿಗಳು, ಅವರ ಕುಟುಂಬ ವರ್ಗದವರ ಆಸ್ತಿ ವಿವರವನ್ನೂ ನೀಡಬೇಕು. ಅದರಲ್ಲಿ ವಿನಾಯಿತಿ ಇಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.