ದೇಶ

ಸೆಕ್ಸ್ ವೆಬ್‌ಸೈಟ್‌ಗಳಿಗೆ ನಿಯಂತ್ರಣ ಹಾಕಿ

Rashmi Kasaragodu

ನವದೆಹಲಿ: ಸೆಕ್ಸ್ ಮತ್ತು ಇತರ ಅಶ್ಲೀಲ ಮಾಹಿತಿಗಳನ್ನು ಒದಗಿಸುವ ವೆಬ್‌ಸೈಟ್ ಮೇಲೆ ನಿಯಂತ್ರಣ  ಹೇರಿ. ಅಂಥವುಗಳನ್ನು ನಿಯಂತ್ರಿಸುವ ಬಗೆಗಿನ ವ್ಯವಸ್ಥೆಯನ್ನು ಮೇಲ್ದರ್ಜಗೆ ಏರಿಸಿ. ಈ ಮೂಲಕ ದೇಶ ವ್ಯಾಪಿಯಾಗಿ ಅವುಗಳನ್ನು ನಿಷೇಧಿಸುವ ಬಗ್ಗೆ ಸಹಕರಿಸಿ'.  ಹೀಗೆಂದು ಕೇಂದ್ರ ಸರ್ಕಾರ ಇಂಟರ್‌ನೆಟ್ ಸೇವಾ ಪೂರೈಕೆದಾರ ಸಂಸ್ಥೆಗಳಿಗೆ ತಾಕೀತು ಮಾಡಿದೆ. ಸಚಿವ ರವಿ ಶಂಕರ ಪ್ರಸಾದ್ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪೂರೈಕೆದಾರ ಸಂಸ್ಥೆಗಳಿಗೆ ಈ ರೀತಿ ತಾಕೀತು ಮಾಡಲು ನಿರ್ಧರಿಸಲಾಗಿದೆ. ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ಮಾಹಿತಿ ನೀಡುವ  ಸೈಟ್‌ಗಳ ಬಗ್ಗೆ ಮಾಹಿತಿ ಸಂಗ್ರಹಣೆ,  ಅವುಗಳನ್ನು ತಡೆಗಟ್ಟುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಇಂಥ ತಾಣಗಳ ಮೇಲೆ ನಿಯಂತ್ರಣ ಹೇರುವುದರ ಜತೆಗೆ ಇತರ ಇಂಟರ್‌ನೆಟ್ ವೇಗಕ್ಕೆ ತಡೆಯಾಗದಂತೆ ನೋಡಿಕೊಳ್ಳುವಂತೆಯೂ ಸೂಚಿಸಿದೆ.

SCROLL FOR NEXT