ನಾಯ್ ಪ್ಯಿ ತಾವ್: ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಲೇಶಿಯಾ ಕಂಪನಿ ಹೂಡಿಕೆದಾರರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.
ಮೂರು ರಾಷ್ಟ್ರಗಳ 10ದಿನಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನದ ಆಸಿಯಾನ್-ಭಾರತ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಎರಡು ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆಯಲ್ಲಿ ತಮ್ಮ ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ' ಅಭಿಯಾನದ ಉದ್ದೇಶದಂತೆ ಮಲೇಷ್ಯಾ ಹೂಡಿಕೆದಾರರನ್ನು ಭಾರತಕ್ಕೆ ಸ್ವಾಗತಿಸಿ ಮಾತನಾಡಿರುವ ಅವರು ಭಾರತದಲ್ಲಿ ಈಗಾಗಲೇ ಸಾಕಷ್ಟು ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವಂತೆ ಮಲೇಷ್ಯಾದವರಿಗೆ ಹೇಳಿದ್ದಾರೆ.
ಸೆ.25 ರಂದು ಎಫ್ ಡಿಐ ವ್ಯಾಖ್ಯಾನ ಬದಲಿಸಿದ್ದ ಮೋದಿ 'ಮೇಕ್ ಇನ್ ಇಂಡಿಯಾ' ಅಭಿಯಾನದ ಮೂಲಕ ವಿದೇಶಿಯರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದರು.