ಲಂಡನ್: ವಾಂಟೆಡ್ ಲಿಸ್ಟ್‌ನಲ್ಲಿದ್ದ ಬ್ರಿಟನ್ ಮೂಲದ ಭಯೋತ್ಪಾದಕ ಮಹಿಳೆ ಸಮಂತಾ ಲ್ಯೂತ್ ವೈಟ್ ಎಂಬುವವಳನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.
ಯುದ್ಧಪೀಡಿತ ಭೂಮಿ ಉಕ್ರೇನ್‌ನಲ್ಲಿ ಬಿಳಿ ವಿಧವೆ ಎಂದೇ ಕರೆಯಲಾಗುತ್ತಿದ್ದ ಸಮಂತಾ ಲ್ಯೂತ್ ವೈಟ್‌ಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವಾರಗಳ ಹಿಂದೆ ಯುದ್ಧಪೀಡಿತ ಭೂಮಿ ಉಕ್ರೇನ್‌ಗೆ ಬಿಳಿ ವಿಧವೆ ಪ್ರವೇಶಿಸಿ, ಸರ್ಕಾರದ ಪರ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು.
ಈಕೆಯನ್ನು ಸೈನಿಕನೊಬ್ಬ ಗುಂಡಿಟ್ಟು ಕೊಂದಿದ್ದಾನೆ. ಈಕೆಯನ್ನು ಕೊಂದಿದ್ದಕ್ಕೆ ಸೈನಿಕನಿಗೆ 630,000 ಡಾಲರ್ ಬಹುಮಾನ ಘೋಷಿಸಿದೆ ಎಂದು ತಿಳಿದು ಬಂದಿದೆ.
ಅಲ್ ಶಬಾಬ್ ಸಂಘಟನೆಯ ಮುಖ್ಯ ಕಮಾಂಡರ್ ಆಗಿದ್ದ ಈಕೆ, 2011ರಲ್ಲಿ ಕೀನ್ಯಾದ ಮೊಂಬಸಾದಲ್ಲಿ ಹೋಟೆಲ್‌ಗಳನ್ನು ಉಡಾಯಿಸುವ ಸಂಚಿನಲ್ಲಿ ಪಾತ್ರ ವಹಿಸಿದ್ದಳು.
ಈ ಬಿಳಿ ವಿಧವೆ ಕೀನ್ಯಾ ಹಾಗೂ ಸೋಮಾಲಿಯಾಗಳಲ್ಲಿ ಕಾರ್ಯಚರಣೆ ನಡೆಸುವ ವೇಲೆ ಪ್ರಮುಖವಾಗಿ ಕಾಣಿಸಿಕೊಂಡಿದ್ದಳು.
ಕಳೆದ ವರ್ಷ ನೈರೋಬಿಯ ಮಾಲ್ ಮೇಲಿನ ದಾಳಿ ನಡೆಸಿ 67 ಜನರನ್ನು ಬಲಿ ತೆಗೆದುಕೊಳ್ಳಲಾಯಿತು. ಈ ದಾಳಿಯ ಪ್ರಮುಖ ರುವಾರಿಯಾದ ಈಕೆಯನ್ನು ವಿಶ್ವದ ಮೋಸ್ಟ್ ವಾಟೆಂಡ್ ಭಯೋತ್ಪಾದಕ ಎಂದು ಘೋಷಿಸಲಾಗಿತ್ತು.
ಈಕೆ ಲಂಡನ್‌ನ ಆತ್ಮಹತ್ಯಾಬಾಂಬರ್ ಜರ್ಮೈನ್ ಲಿಂಡ್ಸೆ ಎಂಬುವವನ್ನು ಮದುವೆಯಾಗಿ ಮತಾಂತರವಾಗಿದ್ದಳು.