ಸಚಿನ್ ತೆಂಡೂಲ್ಕರ್_ಶ್ರೀನಿವಾಸ ರಾಮಾನುಜನ್ 
ದೇಶ

ಬಾಲ್ಯದಲ್ಲೇ ಪ್ರಚಂಡರು

ನಮ್ಮ ಸುತ್ತುಮುತ್ತ ಎಷ್ಟೋ ಸಾಧಕರಿದ್ದಾರೆ. ಅವರಲ್ಲಿ ಕೆಲವರು ಬೆಳೆದ ಮೇಲೆ ತಮ್ಮಲ್ಲಿನ ಪ್ರತಿಭೆಗಳನ್ನು ಪ್ರದರ್ಶಿಸುತ್ತಾ...

ನಮ್ಮ ಸುತ್ತುಮುತ್ತ ಎಷ್ಟೋ ಸಾಧಕರಿದ್ದಾರೆ. ಅವರಲ್ಲಿ ಕೆಲವರು ಬೆಳೆದ ಮೇಲೆ ತಮ್ಮಲ್ಲಿನ ಪ್ರತಿಭೆಗಳನ್ನು ಪ್ರದರ್ಶಿಸುತ್ತಾ ಗಮನಸೆಳೆದರು. ಮತ್ತೆ ಕೆಲವರು ಬಾಲ್ಯದಲ್ಲಿಯೇ ಅತ್ಯದ್ಭುತ ಸಾಧನೆಗಳನ್ನು ಮಾಡಿ 'ಪ್ರಚಂಡ ಪುಟಾಣಿ' ಎಂದೆನಿಸಿಕೊಂಡವರು . ಸಣ್ಣ ವಯಸ್ಸಿನಲ್ಲಿಯೇ ಅಸಾಮಾನ್ಯ ಸಾಧನೆಯ ಲೋಕಕ್ಕೆ ಕಾಲಿಟ್ಟ ಐವರು ಸಾಧಕರು ಇಲ್ಲಿದ್ದಾರೆ.

ಉಸ್ತಾದ್  ಝಾಕಿರ್ ಹುಸೇನ್
ತಬಲಾ ವಾದಕ

ಚೊಚ್ಚಲ ಪ್ರವೇಶ: 12ನೇ ವಯಸ್ಸಿನಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ತಬಲಾ ಕಲಿತವರು. ಕಳೆದ 50 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹುಸೇನ್, ಪ್ರತಿ ವರ್ಷ 150 ಸಂಗೀತ ಕಛೇರಿಗಳನ್ನು ನಡೆಸುತ್ತಾರೆ. ಪದ್ಮಭೂಷಣ, ಗ್ರ್ಯಾಮಿ  ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.


ಶಕುಂತಲಾ ದೇವಿ
ಲೆಕ್ಕದಲ್ಲಿ ನಿಪುಣೆ

ಸಾಧನೆ ಆರಂಭ: 6ನೇ ವಯಸ್ಸಿನಲಲ್ಲಿ ಎಂತಹ ದೊಡ್ಡ ಲೆಕ್ಕಗಳನ್ನೇ ಕೊಟ್ಟರೂ ಸೆಕೆಂಡುಗಳಲ್ಲೇ ಅದನ್ನು ಬಿಡಿಸುಲಂಥ ಜಾದೂಗಾರ್ತಿ. ಅತಿ ದೊಡ್ಡ ಲೆಕ್ಕಗಳಿಗೆ ಇವರು ನೀಡುತ್ತಿದ್ದ ಉತ್ತರ ಸರಿಯೋ ಎಂದು ಪರಿಶೀಲಿಸಲೆಂದೇ ಕಂಪ್ಯೂಟರ್‌ನಲ್ಲಿ ವಿಶೇಷ ಪ್ರೋಗ್ರಾಂವೊಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಇವರನ್ನು ಮಾನವ ಕಂಪ್ಯೂಟರ್ ಎಂದೇ ಕರೆಯಲಾಗುತ್ತಿತ್ತು .

ಕುಮಾರ ಗಂಧರ್ವ
ಗಾಯಕ

ಗಾಯನ ಆರಂಭಿಸಿದ್ದು: 12ನೇ ವಯಸ್ಸಲ್ಲಿ ಇವರ ಪೂರ್ಣ ನೈಜ ಹೆಸರು ಶಿವಪುತ್ರ ಸಿದ್ದರಾಮಯ್ಯ  ಕೋಂಕಾಳಿಮಠ. 5ನೇ ವರ್ಷದಲ್ಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ನೈಪುಣ್ಯತೆ ಪ್ರದರ್ಶಿಸುವ ಮೂಲಕ ಕುಮಾರ ಗಂಧರ್ವ ಎಂಬ ಹೆಸರು ಪಡೆದರು.

ಶ್ರೀನಿವಾಸ ರಾಮಾನುಜನ್
ಗಣಿತಶಾಸ್ತ್ರಜ್ಞ
ಸಾಧನೆಯಲ್ಲಿ ತೊಡಗಿದ್ದು: 13ನೇ ವಯಸ್ಸಿನಲ್ಲಿ 13ನೇ ವಯಸ್ಸಿಗೆ ಬರುತ್ತಿದ್ದಂತೆ ತ್ರಿಕೋನಮಿತೀಯದಲ್ಲಿ ಅದ್ವಿತೀಯ ಸಾಧನೆ ಮಾಡಿ, ತಮ್ಮದೇ ಆದ ಪ್ರಮೇಯವನ್ನು ರೂಪಿಸಿದ್ದರು. ಸುಮಾರು 15ರಷ್ಟು  ಗಣಿತಶಾಸ್ತ್ರದ ಪದಳು ಇವರ ಹೆಸರನ್ನು ಹೊಂದಿವೆ. ಅವರು ವೃತಪಟ್ಟ 77 ವರ್ಷಗಳ ಬಳಿಕವೂ 'ಗುಡ್‌ವಿಲ್ ಹಂಟಿಂಗ್‌' ಎಂಬ ಸಿನಿಮಾವು ಅವರ ಅದ್ಬುತ ಪ್ರತಿಭೆಯನ್ನು ಅನಾವರಣಗೊಳಿಸಿದೆ.

ಸಚಿನ್ ತೆಂಡೂಲ್ಕರ್
ಕ್ರಿಕೆಟಿಗ

ಚೊಚ್ಚಲ ಪ್ರವೇಶ: 16ನೇ ವಯಸ್ಸಲ್ಲಿ ವಿಶ್ವದಲ್ಲೇ ಅತ್ಯುತ್ತಮ ಆಟಗಾರ  ಎಂದು ಪರಿಗಣಿಸಲ್ಪಟ್ಟ ಸಚಿನ್ ಹೆಸರಲ್ಲಿ ಸಾಕಷ್ಟು ವಿಶ್ವ ದಾಖಲೆಗಳಿವೆ. ಅತ್ಯಧಿಕ ರನ್‌ಗಳು ಹಾಗೂ ಸೆಂಚುರಿಗಳ ಸರದಾರನೂ ಹೌದು. 1.2 ಶತಕೋಟಿಯಷ್ಟು ಮಂದಿ ಸಚಿನ್‌ರನ್ನು ದೇವರೆಂದು ಪೂಜಿಸುತ್ತಿರುವುದಕ್ಕೆ ದೊಡ್ಡ ವಿಚಾರ ಬೇರೇನಿದೆ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT