ಜಮ್ಮು: ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಸೇನಾಪಡೆ ಮತ್ತೆ ಭಾರತದ ಸೇನಾ ಪಡೆ ಮೇಲೆ ಅಪ್ರಚೋದಿತ ದಾಳಿ ನಡೆಸಿರುವುದು ಸೋಮವಾರ ವರದಿಯಾಗಿದೆ.
ಗಡಿ ನಿಯಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಸೇನಾಪಡೆ ಭಾರತೀಯರ ಯೋಧರನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆಸಿದೆ.
ಇಲ್ಲಿನ ಪೂಂಚ್ ವಲಯದಲ್ಲಿ ಕಳೆದ ರಾತ್ರಿ 11ಗಂಟೆ ಸುಮಾರಿನಲ್ಲಿ ಪಾಕ್ ಸೇನಾ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಪಾಕ್ ದಾಳಿಗೆ ಭಾರತೀಯ ಸೇನಾ ಪಡೆ ಪ್ರತಿದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.