ಸಾಂದರ್ಭಿಕ ಚಿತ್ರ 
ದೇಶ

ನಕ್ಸಲ್ ನಿಗ್ರಹಕ್ಕೆ ಮಹಿಳಾ ಕಮಾಂಡೋಪಡೆ ನಿಯೋಜನೆ!

ದೇಶದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರ ದಮನಕ್ಕೆ ಕೇಂದ್ರ ಸರ್ಕಾರ ಮಹಿಳಾ...

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರ ದಮನಕ್ಕೆ ಕೇಂದ್ರ ಸರ್ಕಾರ ಮಹಿಳಾ ಕಮಾಂಡೋ ಪಡೆ ನಿಯೋಜಿಸಲು ಆರಂಭಿಸಿದೆ.

ಅದರಂತೆ ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳು ನಕ್ಸಲ್‌ಪೀಡಿತ ಪ್ರದೇಶಗಳ ಕಾಡಿನಲ್ಲಿ ಕಾರ್ಯಾಚರಣೆಗಿಳಿಯಲ್ಲಿದ್ದಾರೆ. ಈ ಮೂಲಕ ಈ ಮಹಿಳಾ ಕಮಾಂಡೋಗಳು ಕೂಡ ನಕ್ಸಲರ ಹೆಡೆಮುರಿ ಕಟ್ಟುವ ಕಾರ್ಯದಲ್ಲಿ ಪುರುಷರ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಲಿದ್ದಾರೆ.

ಈಗಗಾಗಲೇ ಇಂಥ ಒಂದು ಮಹಿಳಾ ಕಮಾಂಡೋ ಪಡೆಯನ್ನು ಚತ್ತೀಸ್‌ಗಡದ ಬಸ್ತಾರ್‌ನಲ್ಲಿ ನಿಯೋಜಿಸಲಾಗಿದೆ. ಬಸ್ತಾರ್ ಪ್ರದೇಶ ನಕ್ಸಲರ ದಾಳಿಯಿಂದಾಗಿಯೇ ಕುಖ್ಯಾತಿಗಳಿಸಿದ ಊರಾಗಿದೆ. ಈ ಮಹಿಳಾ ಕಮಾಂಡೋಗಳು ಯಾವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಕೇವಲ ಆಯಕಟ್ಟಿನ ಜಾಗದಲ್ಲಿರುವ ಕೆಲ ಹಿರಿಯ ಅಧಿಕಾರಿಗಳಿಗಷ್ಟೇ ಗೊತ್ತಿದೆ. ಈ ರೀತಿ ಮಹಿಳೆಯರನ್ನು ನಿಯೋಜಿಸುವುದರಿಂದ ಅನೇಕ ಅನುಕೂಲಗಳಿವೆ.

ಮೊದಲೆಯದು ಗ್ರಾಮದ ಮಹಿಳೆಯರ ಜತೆಗೆ ಮುಕ್ತವಾಗಿ ಬೆರೆಯುವುದು ಸುಲಭವಾಗುತ್ತದೆ. ಇದರಿಂದ ಗುಪ್ತಚರ ಮಾಹಿತಿ ಸಂಗ್ರಹಿಸಲು ಅನೂಕೂಲವಾಗುತ್ತದೆ. ಇದೇ ಮಾದರಿಯನ್ನು ಪಶ್ಚಿಮ ಬಂಗಾಲದಲ್ಲಿ ಅನುಸರಿಸಿರುವ ಭದ್ರತಾಪಡೆಗಳು ಅಲ್ಲಿ ಯಶಸ್ಸನ್ನೂಗಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ