ಮೆರ್ಲ್ಬೋನ್: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಸಹೋದರನಂತೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್ ಮಂಗಳವಾರ ಹೇಳಿದ್ದಾರೆ.
10 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಸ್ಟ್ರೇಲಿಯಾ ಸಂಸತ್‌ಗೆ ಭೇಟಿ ನೀಡಿ ಭಾಷಣ ಮಾಡಿದರು. ಟೋನಿ ಅಬೋಟ್ ಜತೆ ಮಾತುಕತೆ ನಡೆಸಿದ ಮೋದಿ, ಭಾರತದ ಅಭಿವೃದ್ದಿಗೆ ಆಸ್ಟೇಲಿಯಾದ ಸಹಕಾರ ಬೇಕು ಎಂದು ಕೇಳಿದ್ದರು.
ತದ ನಂತರ ಮಾತನಾಡಿದ ಟೋನಿ ಅಬೋಟ್, ಮೋದಿ ಅವರು ನನ್ನ ಸಹೋದರರಂತೆ. ಇದು ನನ್ನ ಮನದಾಳದ ಮಾತು. ಈ ಒಂದು ಸಂಬಂಧ ಸಾಕು ಉಭಯ ದೇಶಗಳ ಬಾಂದವ್ಯ ಗಟ್ಟಿಗೊಳಿಸುವುದಕ್ಕೆ ಎಂದು ಅವರು ಹೇಳಿದ್ದಾರೆ.