ಪ್ರಧಾನಿ ನರೇಂದ್ರ ಮೋದಿ 
ದೇಶ

ಫೆಸಿಫಿಕ್ ದ್ವೀಪ ರಾಷ್ಟ್ರಗಳ ಪ್ರಜೆಗಳಿಗೆ ವಿಶೇಷ ವೀಸಾ ಸೌಲಭ್ಯ

ದ್ವೀಪ ರಾಷ್ಟ್ರಗಳ ಪ್ರಜೆಗಳಿಗೆ ವಿಶೇಷ ವಿಸಾ ಸವಲತ್ತುಗಳನ್ನು ಘೋಷಿಸಿದ್ದಾರೆ...

ಸುವಾ: ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ನಮೋ ಮೋದಿ ಮಂತ್ರ ಇದೀಗ ವಿಶ್ವದ ಮೂಲೆ ಮೂಲೆಗಳಲ್ಲೂ ವ್ಯಾಪಿಸತೊಡಗಿದೆ. ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ವಾಕ್ಚಾತುರ್ಯದ ಮೂಲಕ ವಿದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯ ಗಮನ ಸೆಳೆಯುತ್ತಿದ್ದಾರೆ.

ಅಲ್ಲದೆ ಅನಿವಾಸಿ ಭಾರತೀಯರಿಗೆ ಮಾತ್ರವಲ್ಲದೆ ಭಾರತಕ್ಕೆ ಆಗಮಿಸಲು ಇಚ್ಚಿಸುವ ವಿದೇಶಿಗರಿಗೂ ನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ವಿದೇಶಿಗರು ಭಾರತದತ್ತ ದಾಪುಗಾಲು ಹಾಕಲು ಪ್ರಧಾನಿ ಮೋದಿ ಹೊಸ ಸೂತ್ರಗಳನ್ನು ರಚಿಸಿದ್ದಾರೆ.

ಇದೀಗ ಫೆಸಿಫಿಕ್ ದ್ವೀಪ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಈ ಪುಟ್ಟ ದೇಶಗಳ ಸಂಬಂಧವನ್ನು ವೃದ್ಧಿಸುವ ಸಲುವಾಗಿ, ದ್ವೀಪ ರಾಷ್ಟ್ರಗಳ ಪ್ರಜೆಗಳಿಗೆ ವಿಶೇಷ ವಿಸಾ ಸವಲತ್ತುಗಳನ್ನು ಘೋಷಿಸಿದ್ದಾರೆ. ಅಲ್ಲದೆ ಈ ದ್ವೀಪ ರಾಷ್ಟ್ರಗಳ ಪ್ರಜೆಗಳಿಗೆ ವಿಶೇಷ ನಿಧಿಯನ್ನು ಸಹ ಘೋಷಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಫುಜಿ ದೇಶದ ಸುವಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ನಾಯಕರ ಸಭೆಗೆ ಭಾಗವಹಿಸಿದ ಮೋದಿ, ಭಾರತವು ಫೆಸಿಫಿಕ್ ದ್ವೀಪ ರಾಷ್ಟ್ರಗಳ ಆಪ್ತ ಸಂಗಾತಿಯಲು ಬಯಸುತ್ತಿದ್ದು, ಇದಕ್ಕಾಗಿ ಪ್ರಜೆಗಳ ಕಲ್ಯಾಣಕ್ಕಾಗಿ ವಿಶೇಷ ನಿಧಿಯನ್ನು ಒದಗಿಸುತ್ತಿದೆ ಎಂದು ವಿವರಿಸಿದರು.

ಈ ನಿಧಿಯ ಮೂಲಕ ತಾಂತ್ರಿಕ ನೆರವು ಮತ್ತು ಫೆಸಿಫಿಕ್ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಸಾಮಾರ್ಥ್ಯ ಮತ್ತು ತರಬೇತಿ ನೀಡಲು ಭಾರತ ಸಂತಸವಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದರು.

ಈ ನೂತನ ವೀಸಾ ಸೌಲಭ್ಯ, ಫೆಸಿಫಿಕ್ ದ್ವೀಪ ರಾಷ್ಟ್ರಗಳ ಪ್ರಜೆಗಳು ಭಾರತಕ್ಕೆ ಆಗಮಿಸಲು ಮತ್ತಷ್ಟು ಸುಲಭವಾಗಲಿದೆ. ಈ ಪಟ್ಟಿಯಲ್ಲಿ ಫೆಸಿಫಿಕ್ ದ್ವೀಪ ರಾಷ್ಟ್ರಗಳಾದ, ಕುಕ್ ಐಲ್ಯಾಂಡ್, ಕಿಂಗ್‌ಡಮ್ ಆಫ್ ತೊಂಗಾ, ತುವಾಲು, ರಿಪಬ್ಲಿಕ್ ಆಫ್ ನಾರು, ರಿಪಬ್ಲಿಕ್ ಆಫ್ ಕಿರಿಬಾತಿ, ವನುಆತು, ಸಲೋಮನ್ ದ್ವೀಪಗಳು, ಸಮೋಯ, ರಿಪಬ್ಲಿಕ್ ಆಪ್ ಪೌಲು, ಫ್ಯೂಜಿ ಹಾಗೂ ಘಾನ ದೇಶಗಳು ಸೇರ್ಪಡೆಗೊಂಡಿವೆ.

ಅಲ್ಲದೆ ಈ ದೇಶಗಳ ಅಭಿವೃದ್ಧಿ ನಿಧಿಯನ್ನು ಮುಂದಿನ ವರ್ಷಕ್ಕೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಫೆಸಿಫಿಕ್ ದ್ವೀಪ ರಾಷ್ಟ್ರಗಳ ವ್ಯಾಪರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಭಾರತದಲ್ಲಿ ವಿಶೇಷ ವಾಣಿಜ್ಯ ಕೇಂದ್ರಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ವಿವರಿಸಿದರು.

ಫೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಸೋಲಾರ್ ಫ್ಲಾಂಟ್‌ಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಉಭಯ ದೇಶಗಳ ಸೌಹಾರ್ದಯುತ ಸಂಬಂಧಕ್ಕಾಗಿ 'ಭಾರತ-ಫೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆ' ರಚಿಸಲಾಗಿದ್ದು, ಇದು ಪ್ರತಿ ವರ್ಷವು ನಿಗಧಿತ ಸಮಯದಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೋದಿ ಸ್ಪಷ್ಪಪಡಿಸಿದ್ದಾರೆ.

2015ರಂದು ದೆಹಲಿಯಲ್ಲಿ ನಡೆಯುವ  ಅಂತರಾಷ್ಟ್ರೀಯ ಸಮ್ಮೇಳನಕ್ಕೆ ದ್ವೀಪ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT