ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದ ತನಿಖೆಯನ್ನು ಮುಂದುವರೆಸಿ ಎಂದು ಸಿಬಿಐಗೆ ವಿಶೇಷ ಕೋರ್ಟ್ ಗುರುವಾರ ಸೂಚಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶರಾದ ಭರತ್ ಪರಾಶರ್ ಅವರು, ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ತನಿಖೆಯನ್ನು ಮುಂದುವೆರೆಸಿ, ಪ್ರಗತಿ ತನಿಖಾ ವರದಿಯನ್ನು ಡಿಸೆಂಬರ್ 19ರೊಳಗಾಗಿ ಸಲ್ಲಿಸಬೇಕೆಂದು ಸಿಬಿಐಗೆ ಸೂಚಿಸಿದ್ದಾರೆ.
ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದಾ ಸೇರಿದಂತೆ ಅನೇಕರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.
ವಿಜಯ್ ದರ್ದಾ, ಅವರ ಪುತ್ರ ದೇವೇಂದ್ರ ದರ್ದಾ, ನಾಗ್ಪುರ ಮೂಲದ ಎಎಂಆರ್ ಐರನ್ ಆ್ಯಂಡ್ ಸ್ಟೀಲ್ ಪ್ರೈ.ಲಿ. ಮತ್ತು ಅದರ ನಿರ್ದೇಶಕ ಮನೋಜ್ ಜೈಸ್ವಾಲ್ ಅವರನ್ನು ಹೆಸರಿಸಲಾಗಿತ್ತು.
ಇವರೆಲ್ಲರೂ ಮೋಸದಿಂದ ಕಲ್ಲಿದ್ದಲು ಬ್ಲಾಕ್‌ಗಳನ್ನು ಪಡೆದಿದ್ದು, ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿಲಾಗಿತ್ತು.