ದೇಶ

2ಜಿ ಹಗರಣದ ತನಿಖೆಯಲ್ಲಿ ಭಾಗಿಯಾಗಬೇಡಿ, ರಂಜಿತ್ ಸಿನ್ಹಾಗೆ ಸುಪ್ರೀಂ ತಾಕೀತು

Vishwanath S

ನವದೆಹಲಿ: ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆಯಲ್ಲಿ ಭಾಗಿಯಾಗದಂತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ ನೀಡಿದೆ.

2ಜಿ ಹಗರಣದ ಆರೋಪಿಗಳನ್ನು ಭೇಟಿ ಮಾಡಿದ ಪ್ರಕರಣದ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ ಕಗ್ಗಂಟಾಗಿ ಪರಿಣಮಿಸಿದೆ. ರಂಜಿತ್ ಸಿನ್ಹಾ ವಿರುದ್ಧ ಮಾಡಿರುವಂತಾ ಆರೋಪ ಹಾಗೂ ವಾದ ನಂಬಲಾರ್ಹವಾಗಿದ್ದು, ಹೀಗಾಗಿ ಪ್ರಕರಣದ ತನಿಖೆಯಿಂದೆ ಸರಿಯುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು ಅವರು ರಂಜಿತ್ ಸಿನ್ಹಾರಿಗೆ ಸೂಚಿಸಿದ್ದಾರೆ. ಅಲ್ಲದೆ ರಂಜಿತ್ ಸಿನ್ಹಾ ಅವರ ಜಾಗಕ್ಕೆ ಸಿಬಿಐನ ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸೂಚಿಸಿದ್ದಾರೆ.

ಬಹುಕೋಟಿ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ರಂಜಿತ್ ಸಿನ್ಹಾ ಅವರು, ಹಗರಣದ ಪ್ರಮುಖ ಆರೋಪಿಗಳು ಸಿಬಿಐ ಮುಖ್ಯಸ್ಥರ ನಿವಾಸಕ್ಕೆ ಪದೇ ಪದೆ ಭೇಟಿ ನೀಡಿದ್ದಾರೆ. ಪ್ರಕರಣದ ಆರೋಪಿಗಳ ಜೊತೆಗೆ ರಂಜಿತ್ ಸಿನ್ಹಾ ಅವರು ಕೈಜೋಡಿಸಿದ್ದಾರೆ. ಆರೋಪಿಗಳನ್ನು ರಕ್ಷಿಸುವ ಯತ್ನಿಸಿರುವ ಸಿನ್ಹಾ ಅವರನ್ನು ಹುದ್ದೆಯಿಂದ ವಜಾ ಮಾಡುವಂತೆ ಕೋರಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಗಂಭೀರ ಆರೋಪ ಮಾಡಿದ್ದರು.

ಸಿನ್ಹಾ ವಿರುದ್ಧದ ಆರೋಪಗಳೇನು ?

2 ಜಿ ಹಾಗೂ ಇತರ ಹಗರಣಗಳ ಆರೋಪಿಗಳು ಸಿಬಿಐ ನಿರ್ದೇಶಕರ ಮನೆಗೆ ಆಗಾಗ ಭೇಟಿ ನೀಡಿದ್ದಾರೆ.

ಹಗರಣದ ಕೆಲವು ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಸಿನ್ಹಾ ಯತ್ನಿಸಿದ್ದಾರೆ .

SCROLL FOR NEXT