ದೇಶ

ತಾಜ್‌ಮಹಲನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕಂತೆ!

Rashmi Kasaragodu

ನವದೆಹಲಿ: ಪ್ರೇಮಸೌಧವು ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದ ನಡುವಿನ ಯುದ್ಧಕ್ಕೆ ಕಾರಣವಾಗಲಿದೆಯೇ? ಗೊತ್ತಿಲ್ಲ. ಆದರೆ ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ ಅವರು ತಾಜ್‌ಮಹಲ್  ಅನ್ನು ಬಾಚಿಕೊಳ್ಳುವ ಯತ್ನ ನಡೆಸಿದ್ದಾರೆ. ವಿಶ್ವದ ಅಚ್ಚರಿಗಳಲ್ಲಿ ಒಂದಾದ ತಾಜ್‌ಮಹಲ್ ಅನ್ನು ರಾಜ್ಯ ವಕ್ಫ್ ಮಂಡಳಿಯ ಆಸ್ತಿ ಎಂದು ಘೋಷಿಸಿ ಎಂದು ಅವರು ಆಗ್ರಹಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯದ ವಕ್ಫ್ ಸಚಿವರೂ ಆಗಿರುವ ಖಾನ್, ತಾಜ್‌ಮಹಲ್ ಅನ್ನು ವಕ್ಫ್‌ನ ಸ್ವತ್ತು ಎಂದು ಘೋಷಿಸಿ, ಅದರ ಹೊಣೆಯನ್ನು ತಮಗೇ ವಹಿಸಿ ಎಂದು ಕೇಳಿಕೊಂಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಲಖನೌದ ಈದ್ಗಾದ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಅವರು, ತಾಜ್‌ಮಹಲ್‌ನಲ್ಲಿ ಪ್ರತಿದಿನ 5 ಬಾರಿ ನಮಾಜ್‌ಗೆ ಅವಕಾಶ ಕಲ್ಪಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಅಖಿಲೇಶ್ ಯಾದವ್, 17ನೇ ಶತಮಾನದ ಈ ಸ್ಮಾರಕ ಪ್ರವೇಶಕ್ಕೆ ಇ-ಟಿಕೆಟ್ ವ್ಯವಸ್ಥೆ ಮಾಡುವಂತೆ ಕೋರಿಕೊಂಡಿದ್ದಾರೆ. ಟಿಕೆಟ್ ಖರೀದಿಸಲೆಂದು ದೇಶದ ಹಾಗೂ ವಿದೇಶಿ ಪ್ರವಾಸಿಗರು ಸರತಿ ಸಾಲಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಇ-ಟಿಕೆಟ್ ಬಗ್ಗೆ ಎಷ್ಟು ಬಾರಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ ಎಂದೂ ಹೇಳಿದ್ದಾರೆ. ಜತೆಗೆ ಸ್ಮಾರಕದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸುವಂತೆಯೂ ಮನವಿ ಮಾಡಿದ್ದಾರೆ.

SCROLL FOR NEXT