ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಫಾಲೋವರ್‌ಗಳ ಸಂಖ್ಯೆ 2.5 ಕೋಟಿ ದಾಟಿದೆ. ಈ ಮೂಲಕ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಬಳಿಕ ಅತಿ ಹೆಚ್ಚು ಫಾಲೋವರ್‌ಗಳಿರುವ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು ಅವರು ಉಳಿಸಿಕೊಂಡಿದ್ದಾರೆ. ಮೋದಿ ಅವರ ಅಧಿಕೃತ ಖಾತೆಯನ್ನು 2.5 ಕೋಟಿ ಮಂದಿ ಈಗಾಗಲೇ ಲೈಕ್ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರು ಒಬಾಮರನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಒಬಾಮ ಖಾತೆಗೆ 4.3 ಕೋಟಿ ಫಾಲೋವರ್‌ಗಳಿದ್ದಾರೆ. ಏಪ್ರಿಲ್ ವೇಳೆಗೆ 1.2 ಕೋಟಿಯಿದ್ದ ಮೋದಿ ಫಾಲೋವರ್‌ಗಳ ಸಂಖ್ಯೆ ಸೆಪ್ಟೆಂಬರ್ ವೇಳೆಗೆ 2.1 ಕೋಟಿಗೆ ತಲುಪಿತ್ತು. ಭಾರತದಲ್ಲಿ ಸುಮಾರು 10 ಕೋಟಿ ಫೇಸ್‌ಬುಕ್ ಖಾತೆದಾರರಿದ್ದಾರೆ. ಪ್ರಧಾನಿ ಮೋದಿ ಅವರು ಪೋಸ್ಟ್ ಮಾಡಿರುವ ಸಮರ ನೌಕೆ ಐಎನ್‌ಎಸ್ ವಿಕ್ರಮಾದಿತ್ಯರ ಫೋಟೋಗೆ 8,22,613 ಲೈಕ್‌ಗಳು ಸಿಕ್ಕಿದ್ದರೆ, ಸ್ವಾತಂತ್ರ್ಯ ದಿನಾಚರಣೆಯ ಫೋಟೋಗೆ 7,72,005, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ ಭೇಟಿಯ ಫೋಟೋಗೆ 6, 19, 359, ಒಬಾಮ ಮತ್ತು ಟೋನಿ ಅಬೋಟ್‌ರನ್ನು ಭೇಟಿಯಾದಾಗ ಪೋಸ್ಟ್ ಮಾಡಿದ ಫೋಟೋಗೆ 4,47, 212 ಲೈಕ್‌ಗಳು ಸಿಕ್ಕಿವೆ.