ಸಿಸಿಟಿವಿಯಲ್ಲಿ ಸೆರೆಯಾಗಿರುವ ಟೋಲ್ ಸಿಬ್ಬಂದಿಗೆ ಥಳಿತದ ದೃಶ್ಯ 
ದೇಶ

ಶಾಸಕನ ಬೆಂಬಲಿಗರಿಂದ ಟೋಲ್ ಸಿಬ್ಬಂದಿಗೆ ಮನಸೋ ಇಚ್ಛೆ ಥಳಿತ

ಸಮಾಜವಾದಿ ಶಾಸಕನ ಬೆಂಬಲಿಗರು ಟೋಲ್ ಸಿಬ್ಬಂದಿಗಳನ್ನು ಮನಸೋ ಇಚ್ಛೆ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಾರಾಬಂಕಿ: ಅಹಮದ್‌ಪುರ ಟೋಲ್‌ನಲ್ಲಿ ಸಮಾಜವಾದಿ ಶಾಸಕನ ಬೆಂಬಲಿಗರು ಟೋಲ್ ಸಿಬ್ಬಂದಿಗಳನ್ನು ಮನಸೋ ಇಚ್ಛೆ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾರಾಬಂಕಿಯ ಜಿಲ್ಲೆಯ ಅಹಮದ್‌ಪುರದಲ್ಲಿ ಈ ಘಟನೆ ನಡೆದಿದ್ದು, ಗೌಸಿಯಾಗಂಜ್ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಅಭಯ್ ಸಿಂಗ್ ಅವರ ಬೆಂಬಲಿಗರು ಟೋಲ್ ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಮನಸೋ ಇಚ್ಛೆ ಥಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ಶಾಸಕ ಅಭಯ್ ಸಿಂಗ್ ಮತ್ತು ಅವರ ಬೆಂಬಲಿಗರು ಅಹಮದ್ ನಗರದ ಟೋಲ್‌ಗೇಟ್ ಬಳಿ ರಸ್ತೆ ನಿಯಮಕ್ಕೆ ವಿರುದ್ಧವಾಗಿ ವಾಹನ ಚಲಾಯಿಸುತ್ತಿದ್ದರು. ಇದನ್ನು ಗಮನಸಿದ ಟೋಲ್ ಸಿಬ್ಬಂದಿ ಕೂಡಲೇ ಅವರ ವಾಹನವನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಿದರು.

ಈ ವೇಳೆ ಅದೇ ಕಾರಿನಲ್ಲಿದ್ದ ಅಭಯ್ ಸಿಂಗ್ ಮತ್ತು ಅವರ ಬೆಂಬಲಿಗರು ಟೋಲ್ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಬೆಂಬಲಿಗರು ದೊಣ್ಣೆಗಳಿಂದ ಟೋಲ್ ಸಿಬ್ಬಂದಿಗಳ ಮೇಲೆ ಮನಸೋ ಇಚ್ಛೆ ಥಳಿಸಲು ಮುಂದಾಗಿದ್ದಾರೆ. ಈ ವಿಚಾರ ತಿಳಿದ ಶಾಸಕನ ಮತ್ತಷ್ಟು ಬೆಂಬಲಿಗರು 3 ಫಾರ್ಚುನರ್ ಕಾರುಗಳಲ್ಲಿ ಟೋಲ್ ಬಳಿ ಆಗಮಿಸಿ ಟೋಲ್ ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.

ಈ ಎಲ್ಲ ದೃಶ್ಯಾವಳಿಗಳು ಟೋಲ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಓರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ವೇಳೆ ಶಾಸಕ ಅಭಯ್ ಸಿಂಗ್ ಅವರು ಕಾರಿನಲ್ಲಿಯೇ ಇದ್ದು, ಕನಿಷ್ಟ ಪಕ್ಷ ತಮ್ಮ ಬೆಂಬಲಿಗರನ್ನು ತಡೆಯುವ ಕಾರ್ಯ ಮಾಡಲಿಲ್ಲ ಎಂದು ಟೋಲ್ ಸಿಬ್ಬಂದಿಗಳು ಆರೋಪಿಸಿದ್ದಾರೆ.

'ಶಾಸಕ ಅಭಯ್ ಸಿಂಗ್ ಅವರ ಬೆಂಬಲಿಗರು ನಮ್ಮ ಇಬ್ಬರು ಟೋಲ್ ಸಿಬ್ಬಂದಿಗಳನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಸಾರ್ವಜನಿಕವಾಗಿ ಶಾಸಕನ ಬೆಂಬಲಿಗರು ನಮ್ಮನ್ನು ಥಳಿಸುತ್ತಿದ್ದರೂ ಕೂಡ ಯಾರೊಬ್ಬರೂ ಕೂಡ ಅವರನ್ನು ತಡೆಯಲು ಮುಂದೆ ಬರಲಿಲ್ಲ. ನಮ್ಮಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿದ್ದು, ನಾವು ಇದನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡುತ್ತೇವೆ ಎಂದು ಮತ್ತೋರ್ವ ಟೋಲ್ ಸಿಬ್ಬಂದಿ ಕುಲ್‌ದೀಪ್ ಸಿಂಗ್ ತಿಳಿಸಿದ್ದಾರೆ.

ನಿನ್ನೆಯಷ್ಟೇ ತಮ್ಮ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದ ಎಸ್‌ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಪ್ರಕರಣ ಜನರ ಸ್ಮೃತಿ ಪಟಲದಿಂದ ಅಳಿಸಿ ಹೋಗುವ ಮುನ್ನವೇ ಅವರದೇ ಪಕ್ಷದ ಮತ್ತೋರ್ವ ಮುಖಂಡನ ಬೆಂಬಲಿಗರು ಗೂಂಡಾಗಿರಿ ಪ್ರದರ್ಶನ ಮಾಡುವ ಮೂಲಕ ಪಕ್ಷಕ್ಕೆ ಮತ್ತಷ್ಟು ಮುಜುಗರವನ್ನುಂಟು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT