ದೇಶ

ಭಾರತದಲ್ಲಿ ಭಯೋತ್ಪಾದನೆ ಪಾಕ್ ಪ್ರಾಯೋಜಿತ: ರಾಜನಾಥ್

Mainashree

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಕ್ಕೆ ಪಾಕಿಸ್ತಾನ ಪ್ರೋತ್ಸಾಹ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ.

ನೆರೆ ದೇಶವಾದ ಪಾಕಿಸ್ತಾನ ಭಯೋತ್ಪದಕರಿಗೆ ರಕ್ಷಣೆ ನೀಡುತ್ತಾ, ಭಾರತದ ಮೇಲೆ ದಾಳಿ ಮಾಡಲು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳಿಗೆ ನೆಲೆ ನೀಡಿದೆ ಎಂದು ರಾಜನಾಥ್ ಆಪಾದಿಸಿದ್ದಾರೆ.

ಭಾರತ ಪಾಕ್‌ನೊಂದಿಗೆ ಸ್ನೇಹ ಬಾಂಧವ್ಯದಿಂದಿರಲು ಪ್ರಯತ್ನಿಸುತ್ತಿದ್ದರೆ, ಪಾಕ್ ಮಾತ್ರ ದ್ವೇಷದಿಂದಲೇ ಕಿಡಿಕಾರುತ್ತಿದೆ. ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದೆ ಎಂದು ರಾಜನಾಥ್ ಹೇಳಿದ್ದಾರೆ.

ಭಯೋತ್ಪಾದನೆ ಭಾರತದ ನೆಲದಲ್ಲಿ ಹುಟ್ಟಿಲ್ಲ. ಈ ಭಯೋತ್ಪಾದನೆ ಎಂಬುವುದು ಹುಟ್ಟಿರುವುದೇ ಪಾಕ್ ನೆಲದಲ್ಲಿ ಹಾಗೂ ಅದೇ ಅದರ ತವರಾಗಿ, ಅಕ್ರಮ ಚಟುವಟಿಕೆ ನೆಲೆಯಾಗಿದೆ ಎಂದು ಅವರು ದೂರಿದ್ದಾರೆ.

ಭಾರತದಲ್ಲಿ ಭಯೋತ್ಪಾದನೆ ಕೃತ್ಯನಡೆಸಲು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಾಕ್ಷಿ ಐಎಸ್‌ಐ. ಏಕೆಂದರೆ, ಐಎಸ್‌ಐಗೂ ಮತ್ತು ಭಯೋತ್ಪಾದಕ ಸಂಘಟನೆಗಳಿಗೂ ನಂಟಿದೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಅವರ ಹೇಳಿದ್ದಾರೆ.

SCROLL FOR NEXT