ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಹಾರ ಸಿಎಂ ಮಾಂಝಿಗೆ ಗೇಟ್‌ಪಾಸ್?

ಜಿತನ್ ರಾಂ ಮಾಂಝಿ
Vishwanath S
Updated On : 25 Nov 2014, 9:56 am

ಪಟನಾ: ಬಿಹಾರ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಸದ್ಯದಲ್ಲೇ ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ.

ಇತ್ತೀಚೆಗೆ ಅವರು ನೀಡಿದ ಹೇಳಿಕೆಯು ಅವರ ಮುಖ್ಯಮಂತ್ರಿ ಕುರ್ಚಿಗೆ ಕುತ್ತು ತರುವ ಎಲ್ಲ ಸಾಧ್ಯತೆಯೂ ಎದುರಾಗಿದೆ. ಇದನ್ನು ಸ್ವತಃ ಮಾಂಝಿ ಅವರೇ ಒಪ್ಪಿಕೊಂಡಿದ್ದಾರೆ. ನಾನು ನವೆಂಬರ್ ಅಂತ್ಯದವರೆಗೂ ಈ ಹುದ್ದೆಯಲ್ಲಿರುವುದು ಅನುಮಾನ ಎಂದು ಅವರೇ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಿದ್ದೇ ಆದಲ್ಲಿ ನಾನು ಪ್ರಧಾನಿ ಮೋದಿ ಅವರ ಬೆಂಬಲಿಗನಾಗುತ್ತೇನೆ ಎಂದು ಇತ್ತೀಚೆಗಷ್ಟೇ ಮಾಂಝಿ ಘೋಷಿಸಿದ್ದರು. ಜತೆಗೆ ನಾನೂ ಒಂದು ದಿನ ದೇಶದ ಪ್ರಧಾನಿ ಹುದ್ದೆಗೇರುತ್ತೇನೆ ಎಂದೂ ಹೇಳಿದ್ದರು. ಮಾಂಝಿ ಅವರ ಈ ಹೇಳಿಕೆಯು ಜೆಡಿಯು ನಾಯಕರ ಸಿಟ್ಟನ್ನು ನೆತ್ತಿಗೇರಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement