ನಟಿ-ರಾಜಕಾರಣಿ ಖುಷ್ಬೂ (ಸಂಗ್ರಹ ಚಿತ್ರ) 
ದೇಶ

ಕಾಂಗ್ರೆಸ್ ಸೇರಲಿರುವ ನಟಿ-ರಾಜಕಾರಣಿ ಖುಷ್ಬೂ

ನಟಿ-ರಾಜಕಾರಣಿ ಖುಷ್ಬೂ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ....

ಚೆನ್ನೈ: ನಟಿ-ರಾಜಕಾರಣಿ ಖುಷ್ಬೂ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಂದು ಸಂಜೆ ವಿದ್ಯುಕ್ತವಾಗಿ ಘೋಷಣೆ ಹೊರಬೀಳಲಿದೆ ಎಂದು ನಂಬಲಾಗಿದೆ.

ಎಂ ಕರುಣಾನಿಧಿ ಮುಖಂಡತ್ವದ ಡಿಎಂಕೆ ಪಕ್ಷವನ್ನು ಜೂನ್ ನಲ್ಲಿ ಖುಷ್ಬೂ ತೊರೆದಿದ್ದರು. ತಮಿಳುನಾಡಿನಲ್ಲಿ ೨೦೧೦ ರಲ್ಲಿ ಪಕ್ಷ ಅಧಿಕಾರದಲ್ಲಿದ್ದಾಗ ಪಕ್ಷ ಸೇರಿದ್ದ ಅವರು, ತಾವು ಪಕ್ಷದಿಂದ ಹೊರಬರುತ್ತಿದ್ದುದನ್ನು ಘೋಷಿಸಿದ್ದ ಸಮಯದಲ್ಲಿ "ಡಿಎಂಕೆ ಪಕ್ಷಕ್ಕೆ ಕಷ್ಟ ಪಟ್ಟು ದುಡಿದಿದ್ದೆಲ್ಲಾ ವ್ಯರ್ಥ" ಎಂದು ಬಣ್ಣಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬರೀ ವೀಕ್ಷಕನಾಗಿತ್ತು. ಮೇ ನಲ್ಲಿ ನಡೆದ ಈ ಚುನಾವಣೆಗಳಲ್ಲಿ ಒಂದು ಸ್ಥಾನವನ್ನೂ ಗೆಲ್ಲದೆ ಕಾಂಗ್ರೆಸ್ ದಯನೀಯ ಪ್ರದರ್ಶನ ತೋರಿತ್ತು. ಜೆ ಜಯಲಲಿತಾ ನಾಯಕತ್ವದ ಆಳುತ್ತಿರುವ ಎ ಐ ಡಿ ಎಂ ಕೆ ಪಕ್ಷ ೨ ಸ್ಥಾನಗಳನ್ನು ಬಿಟ್ಟು ಬೇರೆಲ್ಲಾ ಸ್ಥಾನಗಳಲ್ಲೂ ಜಯಗಳಿಸಿತ್ತು.

ಕಳೆದ ೨೦೧೧ ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಐದು ಸ್ಥಾನಗಳನ್ನು ಗಳಿಸಿತ್ತು. ಇತ್ತೀಚೆಗಷ್ಟೆ ತಮಿಳುನಾಡಿನ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿ ಮಾಜಿ ಕೇಂದ್ರ ಸಚಿವ ಜಿ ಕೆ ವಾಸನ್ ಕಾಂಗ್ರೆಸ್ ನಿಂದ ಹೊರ ಬಂದು ಹೊಸ ಪಕ್ಷದ ಘೋಷಣೆ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT