ನವದೆಹಲಿ: 'ಕಪ್ಪುಹಣದ ಬಗ್ಗೆ ಭಾರತದ ಬಳಿ ಇರುವ ಮಾಹಿತಿ ಶೇ.1ರಷ್ಟು ಮಾತ್ರ. ನೆರವು ಯಾಚಿಸಿದರೆ ತನ್ನಿಂದಾದ ಸಹಾಯ ಮಾಡಲು ಸಿದ್ಧ' ಎಂದು ಫ್ರಾನ್ಸ್‌ನ ಮಾಹಿತಿದಾರ ಹೆರ್ವ್ ಫಾಲ್ಸಿಯಾನಿ ಹೇಳಿದ್ದು ನಿಮಗೆ ನೆನಪಿರಬಹುದು. ಇದಕ್ಕೆ ಸ್ಪಂದಿಸಿರುವ ಭಾರತ ಸರ್ಕಾರವು ಹೆರ್ವ್‌ರೊಂದಿಗೆ ಸಂಪರ್ಕ ಹೊಂದಲು ಮುಂದಾಗಿದೆ.
ಹೆರ್ವ್ ಸಂದರ್ಶನವನ್ನು ಪ್ರಸಾರ ಮಾಡಿದ್ದ ಸುದ್ದಿವಾಹಿನಿಯೊಂದು ಈಗ ಹೆರ್ವ್ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಪರ್ಕ ಕಲ್ಪಿಸಿದೆ. ಹೆರ್ವ್ ನೀಡುವ ಮಾಹಿತಿ ಹಿಡಿದುಕೊಂಡು ದೇಶದ 'ಕಪ್ಪು' ಕುಳಗನ್ನು ಬೇಟೆಯಾಡಲು ಹೊರಟಿದೆ ಸರ್ಕಾರ.
ಭಾರತೀಯರು ವಿದೇಶಗಳ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭಾರತ ಇಚ್ಛಿಸಿದರೆ, ತಾನು ತನ್ನ ತಂಡದೊಂದಿಗೆ ಭಾರತಕ್ಕೆ ಬರುತ್ತೇನೆ ಎಂದು ಹೆರ್ವ್ ಹೇಳಿದ್ದರು. ಜತಗೆ 200 ಜಿಬಿ ದತ್ತಾಂಶದ ಪೈಕಿ ಭಾರತದಲ್ಲಿ ಕೈಯಲ್ಲಿರುವುದು 2 ಎಂಬಿ ಮಾತ್ರ ಎಂದೂ ಅವರು ಹೇಳಿದ್ದರು.