ದೇಶ

ಎಬೋಲಾಗೆ 7 ಸಾವಿರ ಬಲಿ

Vishwanath S

ವಿಶ್ವಸಂಸ್ಥೆ: ಭಯಂಕರ ಮಾರಕ ರೋಗ ಎಬೋಲಾಕ್ಕೆ ಪಶ್ಚಿಮ ಆಫ್ರಿಕಾದಲ್ಲಿ ಇದುವರೆಗೂ 7 ಸಾವಿರ ಮಂದಿ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಕಳೆದ ಬುಧವಾರ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್‌ಒ) ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಆ ವರದಿ ಬಿಡುಗಡೆಯಾದ ಕೇವಲ ಎರಡು ದಿನದಲ್ಲಿ ಸುಮಾರು 1200 ಜನ ಸಾವನ್ನಪ್ಪಿರುವುದಾಗಿ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ತಿಳಿದುಬಂದಿದೆ.

ಈ ವರದಿ ಪ್ರಕಾರ ಪಶ್ಚಿಮ ಆಫ್ರಿಕಾದಲ್ಲಿ 7 ಸಾವಿರ ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ಸಾವಿರ ಸಂಖ್ಯೆ ಏರಿಕೆಯಾಗಿರುವ ಬಗ್ಗೆ ವಿಶ್ವಸಂಸ್ಥೆ ಯಾವುದೇ ವಿವರಣೆ ನೀಡಿಲ್ಲ. ಎಬೋಲಾ ಹಬ್ಬಿದಾಗಿನಿಂದ ಇಲ್ಲಿಯವರೆಗೂ ಸುಮಾರು 16 ಸಾವಿರ ಪ್ರಕರಣಗಳು ಪತ್ತೆಯಾಗಿವೆ.

ಮೊದಲು ಗಿನಿಯಾದ ಅರಣ್ಯ ಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಕಾಣಿಸಿಕೊಂಡಿತ್ತು. ನಂತರ ಗಿನಿಯಾ, ಸಿಯೇರಾ, ಲಿಯೋನ್ ಹಾಗೂ ಲೈಬೀರಿಯಾಗಳಿಗೆ ವ್ಯಾಪಿಸಿಕೊಂಡಿದ್ದು, ಇದೀಗ ಇನ್ನಿತರ ದೇಶಗಳಿಗೂ ಎಬೋಲಾ ಮಾರಕ ರೋಗ ತನ್ನ ಕರಾಳ ಹಸ್ತ ಚಾಚಿದೆ.

SCROLL FOR NEXT