ದೇಶ

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ ಇಳಿಕೆ

Srinivasamurthy VN

ನವದೆಹಲಿ: ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ 113 ರುಪಾಯಿ ಕಡಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಗಣನೀಯವಾಗಿ ಇಳಿದ ಪರಿಣಾಮ ಇಂದು ತೈಲೋತ್ಪನ್ನ ಕಂಪನಿಗಳು ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರದಲ್ಲಿ 113 ರುಪಾಯಿ ಕಡಿತ ಮಾಡಿವೆ. ಇದಲ್ಲದೆ ವೈಮಾನಿಕ ಇಂಧನ ದರದಲ್ಲಿಯೂ ಇಳಿಕೆ ಮಾಡಲಾಗಿದ್ದು, ಶೇ.4.1ರಷ್ಟು ದರವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 14.2 ಕೆಜಿ ತೂಕದ ಅಡುಗೆ ಸಿಲಿಂಡರ್‌ನ ಬೆಲೆ 782.50ಕ್ಕಿಳಿದಿದೆ. ಕಳೆದ ಆಗಸ್ಟ್ ತಿಂಗಳಿನಿಂದಲೂ ತೈಲೋತ್ಪನ್ನಗಳು ಇಳಿಕೆಯತ್ತ ಮುಖ ಮಾಡಿದ್ದು, ನಿನ್ನೆಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿತ್ತು.

SCROLL FOR NEXT