ದೇಶ

ನಾಗಲ್ಯಾಂಡ್ ನೈಸರ್ಗಿಕ ಆರ್ಥಿಕ ವಲಯ: ಪ್ರಧಾನಿ ಮೋದಿ

Vishwanath S

ಕೊಹಿಮಾ(ನಾಗಾಲ್ಯಾಂಡ್): ನಾಗಲ್ಯಾಂಡ್ ನೈಸರ್ಗಿಕ ಸಂಪತ್ತಿನ ಆಗರವಾಗಿದ್ದು, ನೈಸರ್ಗಿಕ ಆರ್ಥಿಕ ವಲಯ(ಎನ್‌ಇಝಡ್)ವಾಗಿದೆ. ಈ ಸಂಪತ್ತಿನ ಸರಿಯಾದ ಬಳಕೆಗೆ ಯೋಜನೆ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಎರಡು ದಿನಗಳ ಈಶಾನ್ಯ ಭಾರತ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ನಾಗಲ್ಯಾಂಡ್‌ನ ಕೊಹಿಮಾದಲ್ಲಿ 'ಹಾರ್ನ್‌ಬಿಲ್‌' ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಾರ್ನ್‌ಬಿಲ್ ಉತ್ಸವ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂತಹ ಐತಿಹಾಸಿಕ ಉತ್ಸವಕ್ಕೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ. ಈ ಉತ್ಸವದಲ್ಲಿ ಯುವ ಜನಾಂಗ ಜೋಶ್‌ನಿಂದ ಕೂಡಿದೆ ಎಂದರು.

ನಾಗಲ್ಯಾಂಡ್‌ನಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದರು. ಅಲ್ಲದೆ ನಾಗಲ್ಯಾಂಡ್‌ನಲ್ಲಿ 14 ರೇಲ್ವೆ ಲೇನ್‌ಗಳನ್ನು ಅಳವಡಿಸಲಾಗುವುದು ಇದಕ್ಕಾಗಿ 28 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಮೋದಿ ಘೋಷಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲೂ ನಾಗಲ್ಯಾಂಡ್ ಮಂಚೂಣಿಯಲ್ಲಿದೆ. ಇವರ ಕ್ರೀಡಾ ಸ್ಫೂರ್ತಿ ಮೆಚ್ಚುವಂತದ್ದು, ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕ್ರೀಡಾ ಸ್ಫೂರ್ತಿ ತುಂಬಲು ಈಶಾನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲಶೀಪ್ ನೀಡಲಾಗುವುದು ಎಂದರು.

ಇದೇ ವೇಳೆ, ಪರೋಕ್ಷವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ಈಶಾನ್ಯ ರಾಜ್ಯಕ್ಕೆ ಬರಲು ಪ್ರಧಾನಿಗೆ 10 ವರ್ಷ ಬೇಕಾಯಿತು. 15 ಗಂಟೆಗಳ ಪ್ರವಾಸ ನಿರ್ಧರಿಸುವುದುಕ್ಕೆ ಈ ಹಿಂದಿನ ಪ್ರಧಾನಿಗೆ 10 ವರ್ಷಗಳು ಸಕಾಗಲಿಲ್ಲ ಎಂದರು.

SCROLL FOR NEXT