ಸಾಂದರ್ಭಿಕ ಚಿತ್ರ 
ದೇಶ

ನಟಿ ಶ್ವೇತಾ ಬಸು ಕೊನೆಗೂ ಬಂಧ ಮುಕ್ತ

ಪುನರ್ವಸತಿ ಕೇಂದ್ರದಿಂದ ಶ್ವೇತಾ ಬಿಡುಗಡೆ; ತಾಯಿ ಜೊತೆ ವಾಸಿಸಲು ಕೋರ್ಟ್ ಅನುಮತಿ

ಹೈದರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಪುನರ್ವಸತಿ ಕೇಂದ್ರದಲ್ಲಿದ್ದ ಟಾಲಿವುಡ್ ನಟಿ ಶ್ವೇತಾಬಸು ಅವರನ್ನು ಕೊನೆಗೂ ನ್ಯಾಯಾಲಯ ಬಂಧಮುಕ್ತಗೊಳಿಸಿದೆ.

ಪ್ರಕರಣದ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಹೈದರಾಬಾದ್ ಸೆಷನ್ಸ್ ನ್ಯಾಯಾಲಯ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ವಜಾಗೊಳಿಸಿದ್ದು, ಶ್ವೇತಾ ಅವರ ತಾಯಿಯೊಂದಿಗೆ ವಾಸಿಸಬಹುದು ಎಂದು ತೀರ್ಪು ನೀಡಿದೆ. ಇದಕ್ಕೂ ಮೊದಲು ಶ್ವೇತಾ ಅವರನ್ನು ಅವರ ತಾಯಿಯ ವಶಕ್ಕೆ ನೀಡುವ ಕುರಿತು ಪುನರ್‌ವಸತಿ ಕೇಂದ್ರದಿಂದ ನ್ಯಾಯಾಲಯ ವರದಿ ತರಿಸಿಕೊಂಡಿದ್ದು, ವರದಿಯಲ್ಲಿ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಶ್ವೇತಾ ಅವರನ್ನು ಮನೆಗೆ ಕಳುಹಿಸಬಹುದು ಎಂಬ ವರದಿ ನೀಡಿದ್ದರು.

ಡಿಫೆನ್ಸ್ ಪರ ವಕೀಲ ಪ್ರದೀಪ್ ಕುಮಾರ್ ಅವರು ಕೂಡ ನಟಿ ಶ್ವೇತಾ ಬಸು ಅವರನ್ನು ಅವರ ತಾಯಿ ವಶಕ್ಕೆ ನೀಡಲು ತಮಗೆ ಯಾವುದೇ ರೀತಿಯ ಆಕ್ಷೇಪಣೆ ಇಲ್ಲ ಎಂದು ತಮ್ಮ ವಾದ ಮಂಡಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಶ್ವೇತಾರನ್ನು ಅವರ ತಾಯಿ ಶರ್ಮಿಷ್ಟಾ ಅವರ ವಶಕ್ಕೆ ನೀಡುವುದಾಗಿ ತಿಳಿಸಿದೆ.

ಈ ಹಿಂದೆ ಕಳೆದ ಸೆಪ್ಚೆಂಬರ್ 30ರಂದು ನಡೆದಿದ್ದ ವಿಚಾರಣೆಯಲ್ಲಿ ಕೆಳ ನ್ಯಾಯಾಲಯ ಶ್ವೇತಾಬಸು ಅವರನ್ನು ಶರ್ಮಿಷ್ಟಾ ಅವರ ವಶಕ್ಕೆ ನೀಡಲು ಸಾಧ್ಯವಿಲ್ಲ. ಅವರು ಇನ್ನು 6 ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲೇ ಇರಬೇಕು ಎಂದು ಸೂಚನೆ ನೀಡಿತ್ತು. ಆದರೆ ನ್ಯಾಯಾಲಯದ ಸೂಚನೆಯನ್ನು ಪ್ರಶ್ನಿಸಿ ಶ್ವೇತಾ ಅವರ ತಾಯಿ ಶರ್ಮಿಷ್ಟಾ ಸೆಷನ್ಸ್ ಕೋರ್ಟ್‌ನ ಮೆಟ್ಟಿಲೇರಿದ್ದರು.

'ಈಗೀಗ ತಮ್ಮ ಮಗಳಿಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಲಭಿಸುತ್ತಿದ್ದು, ಆಕೆ ಪುನರ್ವಸತಿ ಕೇಂದ್ರದಲ್ಲೇ ಇದ್ದರೆ ಆಕೆಯ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಆಕೆಯನ್ನು ಬಿಡುಗೆಡೆ ಮಾಡಬೇಕು' ಎಂದು ಮನವಿ ಮಾಡಿದ್ದರು. ಸುಮಾರು 1 ತಿಂಗಳ ವಿಚಾರಣೆ ಬಳಿಕ ಇದೀಗ ಸೆಷನ್ಸ್ ನ್ಯಾಯಾಲಯ ಶ್ವೇತಾ ಅವರನ್ನು ಅವರ ತಾಯಿಯ ವಶಕ್ಕೆ ನೀಡುವಂತೆ ತೀರ್ಪು ನೀಡಿದೆ.

ಕಳೆದ ಆಗಸ್ಟ್ 31 ಭಾನುವಾರದಂದು ಹೈದರಾಬಾದಿನ ಪ್ರತಿಷ್ಟಿತ ಹೊಟೆಲ್‌ವೊಂದರಲ್ಲಿ 23 ವರ್ಷದ ನಟಿ ಶ್ವೇತಾ ಬಸು ಅವರು ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದರು. ಕಾರ್ಯಾಚರಣೆ ನಡೆಸಿದ್ದ ಹೈದರಾಬಾದ್ ಪೊಲೀಸರು ನಟಿ ಶ್ವೇತಾ ಸೇರಿದಂತೆ ಸಹ ನಿರ್ದೇಶಕನೋರ್ವನನ್ನು ಬಂಧಿಸಿದ್ದರು. ಹೆಸರು ಬಹಿರಂಗಗೊಳ್ಳದ ಆ ಸಹ ನಿರ್ದೇಶಕ ನಟಿ ಶ್ವೇತಾಗೆ ಗಿರಾಕಿಗಳನ್ನು ಕರೆತರುವ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ನಟಿ ಶ್ವೇತಾ ಬಸು ಪ್ರಕರಣ ಇಡೀ ಟಾಲಿವುಡ್‌ನಾದ್ಯಂತ ಟಾಕ್ ಆಫ್ ದಿ ಟೌನ್ ಆಗಿತ್ತು. ಅಲ್ಲದೆ ವಿಚಾರಣೆ ವೇಳೆ ನಟಿ ಶ್ವೇತಾ ಹೇಳಿದ್ದ ಕೆಲ ವಿಚಾರಗಳು ಟಾಲಿವುಡ್ ಚಿತ್ರರಂಗದ ಕರಾಳ ಮುಖವನ್ನು ಜಗತ್ತಿಗೆ ಪರಿಚಯಿಸಿತ್ತು. 'ಚಿತ್ರಗಳಲ್ಲಿ ಅವಕಾಶವಿಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ನಾನು ಮಾಂಸದಂಧೆಗೆ ಇಳಿದೆ' ಎಂದು ಶ್ವೇತಾ ವಿಚಾರಣೆ ವೇಳೆ ಹೇಳಿಕೊಂಡಿದ್ದರು. ಶ್ವೇತಾ ಬಸು ಪ್ರಕರಣದ ಕುರಿತ ಸುದ್ದಿಗಳು ಅಗತ್ಯಕ್ಕಿಂತ ಕೊಂಚ ಹೆಚ್ಚಾಗಿಯೇ ಮಾಧ್ಯಮಗಳಲ್ಲಿ ಬಿತ್ತರವಾಗ ತೊಡಗಿತು.

ಈ ವೇಳೆ ಹಿಂದಿಯ ಕಿರುತೆರೆ ನಟಿ ಸಾಕ್ಷಿ ತನ್ವರ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಖ್ಯಾತ ನಟರು ಶ್ವೇತಾ ಅವರ ಬೆಂಬಲಕ್ಕೆ ನಿಂತರು. ನಿರ್ದೇಶಕ ಹನ್ಸಲ್ ಮೆಹ್ತಾ, ಟಾಲಿವುಡ್ ನಾಯಕ ನಟ ಮಂಚು ವಿಷ್ಣು ಸೇರಿದಂತೆ ಹಲವು ಸಿನಿ ದಿಗ್ಗಜರು ಶ್ವೇತಾಗೆ ಅವಕಾಶ ನೀಡಲು ಮುಂದೆ ಬಂದಿದ್ದರು.

ಇದೀಗ ಸತತ 2 ತಿಂಗಳ ಬಳಿಕ ಶ್ವೇತಾ ಮತ್ತೆ ಮನೆಗೆ ವಾಪಸಾಗುತ್ತಿದ್ದು, ಶೀಘ್ರದಲ್ಲೇ ಪುನರ್‌ವಸತಿ ಕೇಂದ್ರದಿಂದ ಬಿಡುಗಡೆಯಾಗಿ ತಮ್ಮ ತಾಯಿಯನ್ನು ಸೇರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!