ಲಾಲು ಪ್ರಸಾದ್ (ಸಂಗ್ರಹ ಚಿತ್ರ) 
ದೇಶ

ಬಿಜೆಪಿ ವಿರುದ್ಧ ಮಹಾಭಾರತ ಯುದ್ಧ: ಲಾಲೂ ಪ್ರಸಾದ್

ಎನ್ ಡಿಎ ಸರ್ಕಾರದ ವಿವಾದಿತ ಭೂಸ್ವಾಧೀನ ಮಸೂದೆ ವಿರುದ್ಧ ತಾವು ಮಹಾಭಾರತ ಯುದ್ಧ ಸಾರುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ...

ನವದೆಹಲಿ: ಎನ್ ಡಿಎ ಸರ್ಕಾರದ ವಿವಾದಿತ ಭೂಸ್ವಾಧೀನ ಮಸೂದೆ ವಿರುದ್ಧ ತಾವು ಮಹಾಭಾರತ ಯುದ್ಧ ಸಾರುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ.

ನವದೆಹಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಲಾಲು ಪ್ರಸಾದ್ ಯಾದವ್ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತ ವಿರೋಧಿ ಭೂಸ್ವಾಧೀನ ಮಸೂದೆ ಮತ್ತು ಕಪ್ಪುಹಣವನ್ನು ಭಾರತಕ್ಕೆ ತರುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮಹಾರಾಭಾರತದಂತೆ ಯುದ್ಧ ಮಾಡಲು ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿನ ಯಶಸ್ಸು ಬಿಜೆಪಿ ತಲೆಗೇರಿದ್ದು, ಅದನ್ನು ಎದುರಿಸಲು ಜನತಾ ಪರಿವಾರ ಇದೀಗ ಒಗ್ಗೂಡಿದೆ. ಜನತಾಪರಿವಾರ ಒಗ್ಗೂಡಿರುವುದೇ ಬಿಜೆಪಿಯನ್ನು ಹೇಳಹೆಸರಿಲ್ಲದಂತೆ ಮಾಡಲು. ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಗಂಟುಮೂಟೆ ಕಟ್ಟಿಕೊಳ್ಳುವಂತೆ ಮಾಡುವುದೇ ಜನತಾ ಪರಿವಾರ ಒಟ್ಟುಗೂಡುತ್ತಿರುವುದರ ಉದ್ದೇಶ` ಎಂದು ಲಾಲೂ ಗು‌ಡುಗಿದ್ದಾರೆ. ಕೇಂದ್ರಸರ್ಕಾರ ರೈತರನ್ನು ಒಳಗೊಂಡಂತೆ ದೇಶದ ಜನತೆಗೆ ಮೋಸ ಮಾಡಿದ್ದು, ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ. ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡುವ ಕಾರ್ಯ ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಿಂದಲೇ ಆರಂಭವಾಗುತ್ತದೆ. ಈ ಕಾರ್ಯಕ್ಕೆ ಇನ್ನಷ್ಟು ಸಮಾನ ಮನಸ್ಕ ಪಕ್ಷಗಳನ್ನು ಜನತಾ ಪರಿವಾರದೊಂದಿಗೆ ವಿಲೀನ ಮಾಡಿಕೊಳ್ಳುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಜನತಾ ಪರಿವಾರದ ಆರು ಪಕ್ಷಗಳಾದ ಸಂಯುಕ್ತ ಜನತಾದಳ, ಆರ್.ಜೆ.ಡಿ., ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ, ಜಾತ್ಯತೀತ ಜನತಾದಳ ಮತ್ತು ಸಮಾಜವಾದಿ ಜನತಾ ಪಾರ್ಟಿ ವಿಲೀನವಾಗಲು ತೀವ್ರ ಚರ್ಚೆಗಳು ಮುಂದುವರೆದಿದ್ದು, ವಿಲೀನದ ಘೋಷಣೆಯನ್ನು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾಡಲಿದ್ದಾರೆ ಎಂದು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಲಾಲೂ ಯಾದವ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ