ನವದೆಹಲಿ: ಕೇವಲ ನಾಲ್ಕೇ ನಾಲ್ಕು ತಿಂಗಳು. ಒಂದು ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ಬದಲು...ಅಂದು ಕನಿಷ್ಠ ಮೂಲಸೌಕರ್ಯಗಳನ್ನೂ ಕಾಣದೇ ಕುಗ್ಗಿಹೋಗಿದ್ದ ಕುಗ್ರಾಮ ಈಗ ಪವಾಡಸದೃಶ ರೀತಿಯಲ್ಲಿ ಅಭಿವೃದ್ಧಿ ಕಂಡು ಕಣ್ಣು ಕುಕ್ಕುತ್ತಿದೆ. ಇದಕ್ಕೆಲ್ಲ `ದೇವರ' ದಯೆಯೇ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು. ಹೌದು. ನಾಲ್ಕು ತಿಂಗಳ ಹಿಂದೆ ಅಕ್ಷರಶಃ ಕೊಳಗೇರಿಯಂತಿದ್ದ ಆಂಧ್ರದ ಪುಟ್ಟಂರಾಜು ಖಂಡ್ರಿಗ ಎಂಬ ಗ್ರಾಮವು `ಕ್ರಿಕೆಟ್ ದೇವರ'
ದರ್ಶನವಾದ ಬಳಿಕ ಸಂಪೂರ್ಣ ಬದಲಾಗಿ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ `ಸಂಸದರ ಆದರ್ಶ ಗ್ರಾಮ ಯೋಜನೆ'ಯನ್ವಯ ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕನಿಷ್ಠ ಅವಧಿಯಲ್ಲೇ ಪುಟ್ಟಂರಾಜು ಖಂಡ್ರಿಗವನ್ನು ಅಚ್ಚರಿ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಎಂಪಿಲಾಡ್ ನಿಧಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಾಗೂ ಪ್ರಾಮಾಣಿಕವಾಗಿ ಒಂದು ಗ್ರಾಮಕ್ಕೆ ಗ್ರಾಮವನ್ನೇ ವಿಸ್ಮಯವೆಂಬಂತೆ ಬದಲಾಯಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ಇತರೆ ಸಂಸದರಿಗೆ `ಆದರ್ಶ'ಪ್ರಾಯರಾಗಿದ್ದಾರೆ
- 4 ತಿಂಗಳ ಹಿಂದೆ ಇಲ್ಲಿನ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಾಗಿತ್ತು. .ಈಗ ಪ್ರತಿ ಮನೆಗಳಲ್ಲೂ ಆಧುನಿಕ ಶೌಚಾಲಯಗಳಿವೆ. ಅಷ್ಟೇ ಅಲ್ಲ, ಟೈಲ್ಸ್ ಹಾಕಿದ
- ಸ್ನಾನಗೃಹಗಳೂ ದಕ್ಕಿವೆ .
- ಆಗಾಗ್ಗೆ ಬರುವ ನೀರಿಗಾಗಿ ಕೊಡ ಹಿಡಿದು ಕಾಯಬೇಕಿತ್ತು. ಕರೆಂಟ್ ಯಾವಾಗ ಕೈಕೊಡುತ್ತದೆಂದು ಗೊತ್ತೇ ಇರಲಿಲ್ಲ. .ಈಗ ಊರಿಡೀ 24 ಗಂಟೆ ವಿದ್ಯುತ್ ಮತ್ತು ನೀರು ಪೂರೈಕೆ ಕಲ್ಪಿಸಲಾಗಿದೆ
- ಮಳೆ ಬಂದರಂತೂ ಇಲ್ಲಿನ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಿತ್ತು. .ಈಗ ಮಳೆ ನೀರು ಹೋಗಲು ಮೋರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ
- ಕೊಳೆಗೇರಿಯಂತಿದ್ದ ಊರಿನಲ್ಲಿ ಈಗ ಒಳಚರಂಡಿ ವ್ಯವಸ್ಥೆ ಮಾಡಲಾಗಿದ್ದು, ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ
- ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಡೀ ಊರು ಸ್ವಚ್ಛ ಹಾಗೂ ಶುಭ್ರವಾಗಿ ಕಾಣುತ್ತಿದೆ ಇಡೀ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳು ರಾರಾಜಿಸುತ್ತಿವೆ.
- ಊರಿಗೆ ಸೂಕ್ತವಾದ ಸ್ಮಶಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಸಮುದಾಯ ಭವನ ಮತ್ತು ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
- ಪ್ರತಿ ಮನೆಯ ಮೇಲೂ ಡಿಶ್ ಆ್ಯಂಟೆನಾಗಳು ಕಾಣುತ್ತಿವೆ ನವೆಂಬರ್‍ನಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣವಾಗಲಿದೆ
ಪರಿಶಿಷ್ಟರಿಗೆ ಮನೆ:
-ಕೊಕುಲು ಪೆಂಚಾಲಯ್ಯ, ಗ್ರಾಮದ ರೈತ
ಖಂಡ್ರಿಗವನ್ನು ಕಂಡಿರಾ?