ದೇಶ

ಸ್ಮೃತಿ ಇರಾನಿ ಟ್ರಯಲ್ ರೂಂ ಪ್ರಕರಣ: 4 ಆರೋಪಿಗಳಿಗೆ ಜಾಮೀನು

Lingaraj Badiger

ಪಣಜಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಟ್ರಯಲ್ ರೂಂನಲ್ಲಿ ರಹಸ್ಯೆ ಕ್ಯಾಮೆರಾ ಪತ್ತೆ ಹಚ್ಚಿದ ಪ್ರಕರಣ ಸಂಬಂಧ ಗೋವಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದ ಫ್ಯಾಬ್ ಇಂಡಿಯಾದ ನಾಲ್ವರು ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಗೋವಾ ಕೋರ್ಟ್, ಐದು ಸಾವಿರ ರುಪಾಯಿ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ನೀಡಿದೆ. ಅಲ್ಲದೆ ಗೋವಾ ಬಿಟ್ಟು ತೆರಳದಂತೆ ಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.

ಪ್ರಕರಣ ಸಂಬಂಧ ನಿನ್ನೆ ನಾಲ್ವರನ್ನು ವಶಕ್ಕೆ ಪಡೆದಿದ್ದ ಗೋವಾ ಪೊಲೀಸರು, ಇಂದು ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಗೋವಾ ಪ್ರವಾಸದಲ್ಲಿರುವ ಸ್ಮೃತಿ ಇರಾನಿ ಅವರು ಕಾಂದೋಳಿಂನಲ್ಲಿನ ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಶುಕ್ರವಾರ ಬಟ್ಟೆ ಖರೀದಿಸಿ ಡ್ರೆಸಿಂಗ್ ರೂಂಗೆ ತೆರಳಿದ್ದರು. ಈ ವೇಳೆ ಅಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದು ಕಂಡು ಬಂತು. ಈ ಬಗ್ಗೆ ಅವರು ಮಳಿಗೆಯ ಮ್ಯಾನೇಜರ್ ಅನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಕಲಂಘೂಟ್ ಬಿಜೆಪಿ ಶಾಸಕ ಮೈಕೆಲ್ ಲೋಬೋಗೆ ಫೋನ್ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

SCROLL FOR NEXT