ದೇಶ

ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಮೃತದೇಹ ಪತ್ತೆ

Vishwanath S

ನವದೆಹಲಿ: ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ಪತ್ತೆಯಾಗಿದೆ. ಮಾರ್ಚ್ 24ರಂದು ಕಣ್ಮರೆಯಾಗಿದ್ದ ಅವರ ಮೃತದೇಹವನ್ನು ರಕ್ಷಣಾ ತಂಡ ಹೊರ ತೆಗೆದಿದೆ.

ಅರ್ಜೆಂಟಿನಾ ಮತ್ತು ಚಿಲಿ ನಡುವಿನ ಎತ್ತರದ ಪರ್ವತಗಳನ್ನು ಹತ್ತಲು ಹೋಗಿದ್ದರು. ಈ ವೇಳೆ ಮಲ್ಲಿ ಮಸ್ತಾನ್ ಬಾಬು ಕಣ್ಮರೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ ಎಂದು ಮಸ್ತಾನ್ ಬಾಬು ಅವರ ಸ್ನೇಹಿತ ಸತ್ಯಂ ಭೀಮರಶೆಟ್ಟಿ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ಮಸ್ತಾನ್ ಬಾಬು ಕಣ್ಮರೆಯಾದ ದಿನದಿಂದ ಅವರ ಸ್ನೇಹಿತ ಸತ್ಯಂ ಅವರು ಫೇಸ್ ಬುಕ್ ಪೇಜ್ ನಲ್ಲಿ ಬಾಬು ಅರ್ಜೆಂಟಿನಾ, ಚಿಲಿ ಪರ್ವತಗಳ ನಡುವೆ ಕಣ್ಮರೆಯಾಗಿದ್ದಾರೆ ಎಂದು ಘೋಷಿಸಿದ್ದರು.

ಅರ್ಜೆಂಟಿನಾ ಮತ್ತು ಚಿಲಿ ದೇಶಗಳ ಹೆಲಿಕಾಫ್ಟರ್ ತಂಡ ಅಂಡೇಸ್ ಪರ್ವತಗಳಲ್ಲಿ ಮಲ್ಲಿ ಮಸ್ತಾನ್ ಬಾಬು ಅವರಿಗಾಗಿ ಹುಡುಗಾಟ ನಡೆಸಿದ್ದವು.

ಉತ್ತರ ಅಮೆರಿಕಾದ ಮೌಂಟ್‌ ದೆನಾಲಿ, ಅಂಟಾರ್ಟಿಕಾದ ಮೌಂಟ್‌ ವಿನ್ಸರ್‌ ಮಾಸ್ಸಿಫ್‌, ಆಸ್ಟ್ರೇಲಿಯಾದ ಕೊಸಸಿಯೋಸ್ಕೋ ಮತ್ತು ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ವಿಶ್ವದ ಎಲ್ಲ ಏಳು ಗಿರಿಶೃಂಗಗಳನ್ನು ಏರಿದ ಭಾರತೀಯ ಎಂಬ ಖ್ಯಾತಿಗೆ ಆಂಧ್ರಪ್ರದೇಶದ ಮಲ್ಲಿ ಮಸ್ತಾನ್‌ ಬಾಬು ಸಹ ಸೇರಿದ್ದರು.




SCROLL FOR NEXT