ದೇಶ

ತಾಂತ್ರಿಕ ದೋಷ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಭಾರೀ ಅನಾಹುತ

Vishwanath S

ನವದೆಹಲಿ: 250 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ವಿಮಾನ ನೆವಾರ್ಕ್ನಿಂದ ಮುಂಬೈಗೆ ಹೊರಟಿದ್ದು, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್‌ ನಲ್ಲಿ ದೋಷ ಕಾಣಿಸಿಕೊಂಡು ತುರ್ತಾಗಿ ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ.

ಏರ್ ಇಂಡಿಯಾ ಬೋಯಿಂಗ್ 777-300  ಇಆರ್ ವಿಮಾನ 250 ಪ್ರಯಾಣಿಕರನ್ನು ಹೊತ್ತೊ ನೆವಾರ್ಕ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಹೊರಟಿತ್ತು. ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತಕ್ಷಣ ಎಚ್ಚೆತ್ತ ಪೈಲಟ್ ಮರಳಿ ಅದೇ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂ ಸ್ಪರ್ಶ ಮಾಡಿಸಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.


ಏರ್ ಇಂಡಿಯಾ ವಿಮಾನ ಟೇಕ್‌ಆಫ್ ಆಗಿ 29 ಸಾವಿರ ಅಡಿಗಳಷ್ಟು ಮೇಲೆ ಹಾರುತ್ತಿತ್ತು. ಈ ಸಮಯದಲ್ಲಿ ಒಂದು ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು ಎನ್ನಲಾಗಿದ್ದು ಇದನ್ನು ಅರಿತ ಪೈಲಟ್ ತಕ್ಷಣ ನೆವಾರ್ಕ್ ವಿಮಾನ ನಿಲ್ದಾಣಕ್ಕೆ ಮರಳಿ ತಲುಪಿಸಿ ಭಾರಿ ದುರಂತವೊಂದನ್ನು ತಪ್ಪಿಸಿ ಶ್ಲಾಘನೆಗೆ ಪಾತ್ರನಾಗಿದ್ದಾನೆ.

SCROLL FOR NEXT