ಸ್ವಲ್ಪ ಎಚ್ಚರ ತಪ್ಪಿದ್ದರೂ ದೇಶಕ್ಕೆ ದೇಶವೇ ಪಶ್ಚಾತ್ತಾಪ ಪಡಬೇಕಿತ್ತು. ಸಾವಿರಾರು ಅಮಾಯಕರು ಪ್ರಾಣ ತೆರಬೇಕಿತ್ತು. ಆದರೆ, ನಮ್ಮ ರಾಷ್ಟ್ರೀಯ ತನಿಖಾ ಸಂಸ್ಥೆ ಎಚ್ಚರಿಕೆಯ ಹೆಜ್ಜೆ ಇಟ್ಟ ಕಾರಣ ಭಾರಿ ದುರಂತವೊಂದು ತಪ್ಪಿದೆ. ಈ ಬಾರಿ ಪೂರ್ವ ಕರಾವಳಿಯ ಮೂಲಕ 26/11ರ ಮÁದರಿಯಲ್ಲೇ ಭಾರಿ ದಾಳಿ ನಡೆಸಿ ಭಾರತವನ್ನು ಅಕ್ಷರಶಃ
ನಡುಗಿಸಲು ಪಾಕಿಸ್ತಾನದ ಐಎಸ್‍ಐ ಸಂಪೂರ್ಣ ಸಿದ್ಧತೆ ನಡೆಸಿತ್ತು. ಶ್ರೀಲಂಕಾದಲ್ಲಿರುವ ಐಎಸ್‍ಐ ಏಜೆಂಟ್‍ಗಳು ಟಾರ್ಗೆಟ್‍ಗಳನ್ನು ಸಮೀಕ್ಷೆ ನಡೆಸಿ, ಕಾರ್ಯಾಚರಣೆಗೆ ಕೋಡ್ ವರ್ಡ್‍ಗಳನ್ನು ನೀಡಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದರು. ಅವರ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎನ್ನುವಷ್ಟರಲ್ಲಿ ಎನ್‍ಐಎ ಇಡೀ ಸಂಚನ್ನು ವಿಫಲಗೊಳಿಸಿದೆ.
ಮಾಸ್ಟರ್‍ಮೈಂಡ್‍ಗಳು?
1. ಅಮೀರ್ ಜುಬೈರ್ ಸಿದ್ದೀಕ್, ಪಾಕಿಸ್ತಾನ ಕೌನ್ಸೆಲರ್, ಕೊಲಂಬೋದಲ್ಲಿನ ಪಾಕಿಸ್ತಾನ ಹೈಕಮಿಷನ್
2. ಬಾಸ್ ಶಾ, ಕೊಲಂಬೋದಲ್ಲಿನ ಪಾಕಿಸ್ತಾನ ಹೈಕಮಿಷನ್‍ನಲ್ಲಿ ಕಾರ್ಯನಿರ್ವಹಿಸುವ ಪಾಕಿಸ್ತಾನಿ ಅಧಿಕಾರಿ ಬಂಧಿತ ಗೂಢಚಾರರು
ಮೊಹಮ್ಮದ್ ಸಾಕಿರ್ ಹುಸೇನ್, ಶ್ರೀಲಂಕಾ ಉದ್ಯಮಿ ಅರುಣ್ ಸೆಲ್ವರಾಜನ್, ಶ್ರೀಲಂಕಾ ಉದ್ಯಮಿ, ತಮೀಮ್ ಅನ್ಸಾರಿ, ತಮಿಳುನಾಡಿನ ತಂಜಾವೂರಿನ ಉದ್ಯಮಿ
ರಹಸ್ಯ ಹೆಸರುಗಳು ವಿವಿಧ ಕಾರ್ಯಾಚರಣೆಗಳಿಗೆ ರಹಸ್ಯ ಹೆಸರುಗಳನ್ನು ನೀಡಲಾಗಿತ್ತು. ಚೆನ್ನೈನ ಅಮೆರಿಕನ್ ಕಾನ್ಸುಲೇಟ್‍ನಲ್ಲಿ ಬಾಂಬಿ
ಡುವ ಕಾರ್ಯಕ್ಕೆ `ವೆಡ್ಡಿಂಗ್ ಪ್ರಾಜೆಕ್ಟ್' ಎಂಬ ಕೋಡ್‍ನೇಮ್ ನೀಡಲಾಗಿದ್ದರೆ,ಅಮೆರಿಕದ ಕಾನ್ಸುಲೇಟ್‍ಗೆ `ವೆಡ್ಡಿಂಗ್ ಹಾಲ್' ಎಂದು ಕರೆಯಲಾಗಿತ್ತು. ಇಲ್ಲಿ
ಉಗ್ರರನ್ನು `ಕುಕ್'(ಬಾಣಸಿಗ) ಗಳೆಂದೂ, ಸ್ಪೋಟಕ ಸಾಧನಗಳನ್ನು `ಸ್ಪೈಸ್ ಕಂಟೆಂಟ್ಸ್'(ಮಸಾಲೆ ಪದಾರ್ಥ) ಎಂದು ಕರೆಯಲಾಗುತ್ತಿತ್ತು.
ಇದು 26/11ರ ಮುಂಬೈ ದಾಳಿಯ ಪುನರಾಗಮನ...
ತನಿಖಾ ಸಂಸ್ಥೆ ಗಳು ಸರಿಯಾದ ಸಮಯದಲ್ಲಿ ಎಚ್ಚೆತ್ತು ಕೊಂಡು, ಸಂಚನ್ನು ವಿಫಲಗೊಳಿಸಿದವು. ಒಟ್ಟಿನಲ್ಲಿ ಭಾರಿ ದುರಂತ ತಪ್ಪಿತು. ಶರದ್ ಕುಮಾರ್, ಎನ್‍ಐಎ ಮುಖ್ಯಸ್ಥ ಯೋಜನೆಯೇ ನಿತ್ತು? ಲಂಕಾದ ಮನ್ನಾರ್‍ನಿಂದ ರಾಮೇಶ್ವರಂ, ಟ್ಯುಟಿಕೋರಿನ್‍ಗೆ ದೋಣಿ ಮೂಲಕ ಸ್ಪೋಟಕ ಇಬ್ಬರು ಪಾಕಿಸ್ತಾನೀಯರನ್ನು ಶ್ರೀಲಂಕಾ ಪಾಸ್‍ಪೋರ್ಟ್‍ನಲ್ಲಿ ಕೊಲಂಬೋದಿಂದ ಮಾಲ್ಡೀವ್ಸ್ ಮೂಲಕ ಬೆಂಗಳೂರಿಗೆ ಕಳುಹಿಸುವುದು. ಸಮೀಕ್ಷೆ ಮಾಡಿರುವಂತಹ ಪ್ರದೇಶಗಳಲ್ಲಿ ಇವರು ದಾಳಿ ನಡೆಸಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಲಂಕಾ ಪ್ರಜೆ ಮೊಹಮ್ಮದ್ ಸುಲೈಮಾನ್ ಎಂಬಾತನೂ ಭಾರತಕ್ಕೆ ಬಂದು, ಉಳಿದ ಉಗ್ರರೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾನೆ.
ಟಾರ್ಗೆಟ್‍ಗಳಾವುವು?
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನ ಇಸ್ರೇಲ್ ದೂತವಾಸ ಚೆನ್ನೈನಲ್ಲಿರುವ ಅಮೆರಿಕದ ದೂತವಾಸ
ಪ್ರಾಜೆಕ್ಟ್ ವರ್ಷಾ, ವಿಶಾಖಪಟ್ಟಣ ಸಮೀಪದ ಭಾರತದ ಹೊಸ ನೌಕಾನೆಲೆ
ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣ,ರಾಜೀವ್‍ಗಾಂಧಿ ಆಸ್ಪತ್ರೆ, ದೂರದರ್ಶನ ಕೇಂದ್ರ, ಹೈಕೋರ್ಟ್
ವೆಲ್ಲಿಂಗ್ಟನ್ ಮಿಲಿಟರಿ ತರಬೇತಿ ಕೇಂದ್ರ, ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜು, ಸ್ಟೇಷನ್ ಪ್ರಧಾನ ಕಚೇರಿ
ಚೆನ್ನೈ ಬಂದರಿನಲ್ಲಿರುವ ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ
ನಾಗಪಟ್ಟಣಂ ಹಾರ್ಬರ್
ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಕಲ್ಪಕಂ ಅಣುಶಕ್ತಿ ಕೇಂದ್ರ
ಭಾರತೀಯ ವಾಯುಪಡೆ, ತಂಜಾವೂರು
ಮಲ್ಲಿಪಟ್ಟಿನಂನಲ್ಲಿರುವ ಭಾರತೀಯ ನೌಕಾ ನೆಲೆ ಮತ್ತು ಮಲ್ಲಿಪಟ್ಟಿನಂ ಮೀನುಗಾರಿಕಾ ಜೆಟ್ಟಿ