ದೇಶ

ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ನಿಷೇಧ

Lingaraj Badiger

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, 10 ವರ್ಷ ಹಳೆಯದಾದ ಎಲ್ಲಾ ಡೀಸೆಲ್ ವಾಹನಗಳಿಗೆ ನಿಷೇಧ ಹೇರಿದೆ.

ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದ್ದು, ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಡೆನ್ಮಾರ್ಕ್, ಬ್ರಜಿಲ್ ಚೀನಾ ಮತ್ತು ಶ್ರೀಲಂಕಾದಂತ ದೇಶಗಳು ಡೀಸೆಲ್ ವಾಹನಗಳಿಗೆ ಸಂಪೂರ್ಣ  ನಿಷೇಧ ಹೇರಲು ಮುಂದಾಗಿವೆ ಎಂದಿದ್ದಾರೆ.

'ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಡೀಸೆಲ್ ವಾಹನಗಳನ್ನು ನಿಷೇಧಿಸಿವೆ ಮತ್ತು ಇನ್ನು ಕೆಲವು ರಾಷ್ಟ್ರಗಳು ನಿಷೇಧಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ ಅಥವಾ ಡೀಸೆಲ್ ವಾಹನಗಳಿಗೆ ಭಾರಿ ಮೊತ್ತದ ತೆರಿಗೆ ವಿಧಿಸುವ ಮೂಲಕ ನಿಯಂತ್ರಿಸಲಾಗುತ್ತಿದೆ' ಎಂದು ನ್ಯಾ.ಸ್ವತಂತ್ರ ಕುಮಾರ್ ಅವರು ಹೇಳಿದ್ದಾರೆ.

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶ(ಎನ್ ಸಿಆರ್)ದಲ್ಲಿ ಯಾವುದೇ ರೀತಿಯ ಭಾರಿ ಹಾಗೂ ಲಘು ಡೀಸೆಲ್  ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವಂತೆ ನ್ಯಾಯಪೀಠ ಸೂಚಿಸಿದೆ.

SCROLL FOR NEXT