ಮುಂಬೈ: ಗೋಹತ್ಯೆ ನಿಷೇಧದ ಬೆನ್ನಲ್ಲೇ ಈಗ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಮಹಾರಾಷ್ಟ್ರದ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರೈಮ್ ಅವಧಿ (ಸಂಜೆ 6ರಿಂದ 9ಗಂಟೆವರೆಗೆ)ಯಲ್ಲಿ ಒಂದು ಮರಾಠಿ ಸಿನಿಮಾವನ್ನಾದರೂ ಪ್ರದರ್ಶಿಸುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ. ಅಂದರೆ ಪ್ರತಿ ಮಲ್ಟಿಫ್ಲೆಕ್ಸ್ ಗಳು ತಮ್ಮ ನಾಲ್ಕೈದು ಸ್ಕ್ರೀನ್‍ಗಳಲ್ಲಿ ಒಂದರಲ್ಲಾದರೂ ಮರಾಠಿ ಸಿನಿಮಾ ಪ್ರದರ್ಶಿಸಬೇಕಿದೆ. ಮಹಾ ಸರ್ಕಾರದ ಈ ನಿರ್ಧಾರಕ್ಕೆ ಬಾಲಿವುಡ್‍ನಿಂದ ಸಮ್ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದಷ್ಟು ಮಂದಿ ಸರ್ಕಾರದ ಕ್ರಮವನ್ನು ಬೆಂಬಲಿಸಿದರೆ, ಇನ್ನು ಕೆಲವರು ಇದರಿಂದ ಬಾಲಿವುಡ್‍ಗೆ ಹೊಡೆತ ಬೀಳಲಿದೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಎಲ್ಲ ಭಾಷೆಯ ಜನರೂ ನೆಲೆಸಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ರೀತಿಯ ಕ್ರಮ ನಿಯಮ ಪಾಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮರಾಠಿ ಸಿನಿಮಾ ಉದ್ಯಮ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದೆ.ಈ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‍ನಲ್ಲೂ ಚರ್ಚೆಯಾಗುತ್ತಿದೆ.