ಲೇಖಕಿ ಶೋಭಾ ಡೇ 
ದೇಶ

ಶೋಭಾ ಡೇ ವಿರುದ್ಧ ಮಹಾ ಖಂಡನೆ

ಲೇಖಕಿ ಶೋಭಾ ಡೇ ಟ್ವೀಟ್ ಗಳು ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ವಿಧಾನಸಭೆಯಲ್ಲಿ ಶಿವಸೇನೆ ನೇತೃತ್ವದಲ್ಲಿ...

ನವದೆಹಲಿ: ಲೇಖಕಿ ಶೋಭಾ ಡೇ ಟ್ವೀಟ್ ಗಳು ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ವಿಧಾನಸಭೆಯಲ್ಲಿ ಶಿವಸೇನೆ ನೇತೃತ್ವದಲ್ಲಿ ಬುಧವಾರ ಖಂಡನಾ ನಿಲುವಳಿ ಮಂಡಿಸಲಾಗಿದೆ.

ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರೈಂಟೈಮ್ ಅಂದರೆ ಸಂಜೆ 6ರಿಂದ 9ಗಂಟೆ ಅವಧಿಯಲ್ಲಿ ಕೇವಲ ಮರಾಠಿ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕೆಂಬ `ಮಹಾ' ಸರ್ಕಾರದ ಆದೇಶವನ್ನು ಶೋಭಾ ಡೇ ಟೀಕಿಸಿದ್ದರು. ಫಡ್ನವಿಸ್ ಅವರನ್ನು `ದಿಕ್ತಟ್ ವಾಲಾ', ಸರ್ಕಾರದ ಕ್ರಮವನ್ನು `ದಾದಾಗಿರಿ' ಎಂದು ಟ್ವಿಟರ್‍ನಲ್ಲಿ ತೀವ್ರವಾಗಿ ಟೀಕಿಸಿದ್ದರು.

ಆದರೆ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಹಾಗೂ ಶಿವಸೇನೆ ಮುಖಂಡರು ಶೋಭಾ ಡೇ ವಿರುದ್ಧ ಖಂಡನಾ ನಿಲುವಳಿ ಮಂಡಿಸಿದ್ದಾರೆ. ಶೋಭಾ ಡೇ ಟ್ವೀಟ್‍ಗಳು ಮಹಾರಾಷ್ಟ್ರದ ಜನತೆಯನ್ನು ಅವಮಾನಿಸಿದೆ ಎಂದು ಶಿವಸೇನೆ ಶಾಸಕ ಪ್ರತಾಪ್ ಸರನಾಯಕ್ ಹೇಳಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರನ್ನು ಲೇವಡಿ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದೂ ಅವರು ಒತ್ತಾಯಿಸಿದ್ದಾರೆ.

ಶೋಭಾ ಡೇ ಟ್ವೀಟ್ ನಲ್ಲೇನಿದೆ?
`ಇನ್ಮೇಲೆ ಮಲ್ಟಿಪ್ಲೆಕ್ಸ್ ನಲ್ಲಿ ಪಾಪ್‍ಕಾರ್ನ್ ಮಾರುವ ಬದಲು ದಹಿ ಮಸಾಲೆ ಹಾಗೂ ವಡಾ ಪಾವ್ ಮಾರಬೇಕೆಂದು ಆದೇಶ ನೀಡಿದರೂ ಅಚ್ಚರಿಯಿಲ್ಲ. ಬೀಫ್ ಬ್ಯಾನ್ ಮಾಡಿದ ನಂತರ ಈಗ ಮುಖ್ಯಮಂತ್ರಿಗಳ ಕಣ್ಣು ಸಿನಿಮಾಗಳತ್ತ ಬಿದ್ದಿದೆ. ನಾವು ಪ್ರೀತಿಸೋ ಮಹಾರಾಷ್ಟ್ರ ಇದಲ್ಲ. ನಾವು ಯಾವ ಸಿನಿಮಾ ಯಾವ ಹೊತ್ತಿಗೆ ನೋಡಬೇಕು ಅನ್ನೋದು ನಮಗೆ ಬಿಟ್ಟದ್ದು. ಇದು ಮುಖ್ಯಮಂತ್ರಿಯ ದಾದಾಗಿರಿ.

ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಚರ್ಚಿಸದೆ ಏಕಾಏಕಿ ನಿರ್ಧರಿಸಿದ್ದು ತಪ್ಪು. ಹಾಗಿದ್ದಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಸರ್ಕಾರ ಸಹಾಯ ಧನವನ್ನೂ ಘೋಷಿಸಲಿ' ಎಂದು ಪ್ರತ್ಯೇಕ ಟ್ವೀಟ್ ಗಳಲ್ಲಿ ಬರೆದುಕೊಂಡಿರುವ ಶೋಭಾ ನಿಲುವಳಿ ಮಂಡಿಸಿದ್ದು ಗೊತ್ತಾಗುತ್ತಿದ್ದಂತೆ ನಾನು ಮರಾಠಿ ವಿರೋಧಿಯಲ್ಲ. ನಾನು ಮರಾಠಿ ಸಿನಿಮಾ ಮತ್ತು ಭಾಷೆ ಅಭಿಮಾನಿ ಎಂದು ಮತ್ತೊಂದು ಟ್ವೀಟ್ ಬಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?