ಝಕಿ ಉರ್ ರೆಹಮಾನ್ ಲಖ್ವಿ 
ದೇಶ

ಉಗ್ರ ಲಖ್ವಿ ತಕ್ಷಣ ಬಿಡುಗಡೆಗೆ ಪಾಕ್ ಕೋರ್ಟ್ ಆದೇಶ

ಇಸ್ಲಾಮಾಬಾದ್: ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿಯನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಗುರುವಾರ ಪಾಕಿಸ್ತಾನ ಕೋರ್ಟ್ ಆದೇಶಿಸಿದೆ.

ಲಖ್ವಿ ಬಂಧನ ಕಾನೂನು ಬಾಹಿರ ಎಂದಿರುವ ಲಾಹೋರ್ ಹೈಕೋರ್ಟ್, ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿರುವ ಲಖ್ವಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿರುವುದಾಗಿ ಜಿಯೊ ಟಿವಿ ವರದಿ ಮಾಡಿದೆ.

ಪಾಕಿಸ್ತಾನ ಸರ್ಕಾರ ಲಖ್ವಿಯ ರಹಸ್ಯ ದಾಖಲೆ ಪತ್ರಗಳು ಮತ್ತು ಆತನ ಚಟುವಟಿಕೆಯ ವಿವರ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಲಾಹೋರ್ ಕೋರ್ಟ್, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಯಿದೆಯಡಿ ಲಖ್ವಿ ಬಂಧನವನ್ನು ರದ್ದುಗೊಳಿಸಿ, ಬಿಡುಗಡೆಗೆ ಆದೇಶಿಸಿದೆ.

ಝಕಿ ಉರ್ ರೆಹಮಾನ್ ಲಖ್ವಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಿಂದಲೂ ಜೈಲುವಾಸದಲ್ಲಿದದ್ದು, ಕಳೆದ ವರ್ಷ ಡಿ.18ರಂದು ಭಯೋತ್ಪಾದನಾ ನಿಗ್ರಹ ಕೋರ್ಟ್ ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಮತ್ತೆ ಆತನನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಲಖ್ವಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು. ನಂತರ ಹೈಕೋರ್ಟ್ ಆತನ ಬಂಧನದ ಆದೇಶ ಅಮಾನತಿನಲ್ಲಿಟ್ಟು ಜಾಮೀನು ನೀಡಿತ್ತು.

ಪಾಕಿಸ್ತಾನ ಕೋರ್ಟ್ ಲಖ್ವಿಗೆ ಹಲವು ಬಾರಿ ಜಾಮೀನು ನೀಡಿದರೂ, ಭಾರತದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಸರ್ಕಾರ ಉಗ್ರನ ಬಿಡುಗಡೆಯನ್ನು ತಡೆಯುತ್ತಾ ಬಂದಿದೆ. ಈಗ ಮತ್ತೆ ಉಗ್ರನ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT