ದೇಶ

2 ವರ್ಷದಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ: ಮನೋಹರ್ ಪರಿಕ್ಕರ್

Srinivasamurthy VN

ಪ್ಯಾರಿಸ್: ಫ್ರಾನ್ಸ್ ದೇಶದೊಂದಿಗಿನ ಬಹು ನಿರೀಕ್ಷಿತ ರಫೇಲ್ ಜೆಟ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲಾಂಡ್ ಅವರು ಸಹಿ ಹಾಕಿದ್ದಾರೆ.

ಪ್ರಧಾನಿ ಮೋದಿ ಅವರ ಫ್ರಾನ್ಸ್ ಪ್ರವಾಸದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅಂತೂ ಉಭಯ ರಾಷ್ಟ್ರಗಳ ಸಹಿ ಹಾಕಿದ್ದು, 36 ಅತ್ಯಾಧುನಿಕ ಜೆಟ್ ವಿಮಾನಗಳು ಶೀಘ್ರದಲ್ಲಿಯೇ ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳ್ಳಲಿದೆ. ಇನ್ನು ಹಾರುವ ಹಂತದಲ್ಲಿರುವ ರು. 74.70 ಕೋಟಿ ಮೌ ಲ್ಯದ 36 ವಿಮಾನಗಳನ್ನು ತಕ್ಷಣವೇ ಖರೀದಿಸಲಾಗಿದ್ದು, ಉಳಿದ 108 ವಿಮಾನಗಳನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್‍ನಲ್ಲಿ ಜೋಡಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ ಹಾಲೆಂಡ್ ಜತೆಗೆ ಶುಕ್ರವಾರ ಪ್ಯಾರಿಸ್‍ನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ಮಾಹಿತಿ ನೀಡಿದ್ದರು.

ಇನ್ನು ಪ್ರಸ್ತುತ ಭಾರತ ಮತ್ತು ಫ್ರಾನ್ಸ್ ದೇಶಗಳು ಸಹಿ ಮಾಡಿರುವ ವಿಮಾನ ಖರೀದಿ ಒಪ್ಪಂದದಂತೆ ಇನ್ನೆರಡು ವರ್ಷಗಳಲ್ಲಿ ಹಂತಹಂತವಾಗಿ ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನಗಳ ಭಾರತಕ್ಕೆ ಆಗಮಿಸಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ. ಅತ್ತ ಪ್ಯಾರಿಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ ಹಾಲೆಂಡ್ ಯುದ್ಧ ವಿಮಾನ ಒಪ್ಪಂದಕ್ಕೆ ಸಹಿಹಾಕಿದ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ವಾಯುಸೇನೆಯ ಸತತ 17 ವರ್ಷಗಳ ಪರಿಶ್ರಮ ಫಲನೀಡಿದ್ದು, ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿಯಾಗಿದೆ. ಇನ್ನೆರಡು ವರ್ಷದಲ್ಲಿ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯನ್ನು ಸೇರಿಕೊಳ್ಳಲಿವೆ ಎಂದು ಹೇಳಿದರು.

ಭಾರತೀಯ ವಾಯುಸೇನೆಗೆ 43 ಚುಕಡಿಗಳ ತುರ್ತು ಅಗತ್ಯತೆ ಇದ್ದು, ಪ್ರಸ್ತುತ 34 ತುಕಡಿಗಳನ್ನು ಮಾತ್ರ ನಮ್ಮ ವಾಯುಸೇನೆ ಹೊಂದಿದೆ. ಹೀಗಾಗಿ ವಾಯುಸೇನೆಗೆ ತುರ್ತಾಗಿ ಇನ್ನು 8 ತುಕಡಿಗಳನ್ನು ಸೇರಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದರ ಪರಿಣಾಮ ಇನ್ನು 8 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಈ 8 ತುಕಡಿಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

SCROLL FOR NEXT