ಬಾಲಿವುಡ್ ಗಾಯಕ ಮಿಕಾ ಸಿಂಗ್ 
ದೇಶ

ವೇದಿಕೆ ಮೇಲೆಯೇ ಡಾಕ್ಟರ್ ಗೆ ಕಪಾಳ ಮೋಕ್ಷ ಮಾಡಿದ ಗಾಯಕ ಮಿಕಾ ಸಿಂಗ್

ವಿವಾದಗಳಿಂದಲೇ ಸದಾಕಾಲ ಸುದ್ದಿಯಲ್ಲಿರುವ ಬಾಲಿವುಡ್ ಗಾಯಕ ಮಿಕಾ ಸಿಂಗ್ ಕಾರ್ಯಕ್ರಮದ ವೇದಿಕೆಯೊಂದರ ಮೇಲೆ ಡಾಕ್ಟರ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ...

ನವದೆಹಲಿ: ವಿವಾದಗಳಿಂದಲೇ ಸದಾಕಾಲ ಸುದ್ದಿಯಲ್ಲಿರುವ ಬಾಲಿವುಡ್ ಗಾಯಕ ಮಿಕಾ ಸಿಂಗ್ ಕಾರ್ಯಕ್ರಮದ ವೇದಿಕೆಯೊಂದರ ಮೇಲೆ ಡಾಕ್ಟರ್ ಒಬ್ಬರಿಗೆ ಕಪಾಳ ಮೋಕ್ಷ ಮಾಡಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ.

ದೆಹಲಿಯ ಇಂದುಪುರಿಯ ಪೂಸಾ ಇನ್ಸ್ಟಿಟ್ಯೂಟ್ ಮೇಳ ಗ್ರೌಂಡ್ ನಲ್ಲಿ ನೇತ್ರವಿಜ್ಞಾನದ ವಿಭಾಗ ಭಾನುವಾರ ಆಯೋಜಿಸಿದ್ದ ವೈದ್ಯರ ಸಮ್ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಾಲಿವುಡ್ ಗಾಯಕ ಮಿಕಾ ಸಿಂಗ್ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹಾಡು ಹಾಡಿದ ಮಿಕಾ ಸಿಂಗ್ ಅವರು ಎಲ್ಲಾ ವೈದ್ಯರನ್ನು ಸೇರಿಸಿ ವೇದಿಕೆಯ ಮೇಲೆ ಆಟವೊಂದನ್ನು ಆಡಲು ನಿರ್ಧರಿಸಿದ್ದರು.

ಕಾರ್ಯಕ್ರಮಕ್ಕೆ ಬರುವುದಕ್ಕೂ ಮೊದಲೇ ಕಾರ್ಯಕ್ರಮ ಆಯೋಜಕರಿಗೆ ಪುರುಷರು ಬಲಬದಿಗೆ ಹಾಗೂ ಮಹಿಳಾ ವೈದ್ಯರು ಎಡಬದಿಯ ಆಸನಗಳಲ್ಲಿ ಬೇರೆಬೇರೆಯಾಗಿ ಕೂರುವಂತೆ ತಿಳಿಸಿದ್ದರಂತೆ. ಮಿಕಾಸಿಂಗ್ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ನೇತ್ರತಜ್ಞ ಶ್ರೀಕಾಂತ್ ಎಂಬುವವರು ಇದ್ದಕ್ಕಿದ್ದಂತೆ ಮಹಿಳಾ ವೈದ್ಯರು ಕುಳಿತಿದ್ದ ಆಸನಗಳ ಕಡೆ ಹೋಗಲು ಯತ್ನಿಸಿದ್ದಾರೆ.

ಇದಕ್ಕೆ ಸಿಟ್ಟುಗೊಂಡ ಮಿಕಾಸಿಂಗ್ ಆ ವೈದ್ಯನನ್ನು ವೇದಿಕೆ ಕರೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇದ್ದಕ್ಕಿದ್ದಂತೆ ಮಿಕಾಸಿಂಗ್ ವೈದ್ಯನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ಘಟನೆಯನ್ನು ತಿಳಿಗೊಳಿಸಿದ್ದಾರೆ. ಆದರೆ ಈ ದೃಶ್ಯವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  

ಇದೀಗ ಕಪಾಳಮೋಕ್ಷ ಮಾಡಿಸಿಕೊಂಡ ವೈದ್ಯನ ಎಡ ಕಿವಿಯ ಭಾಗದಲ್ಲಿ ಆಂತರಿಕವಾಗಿ ಕೆಲವು ನ್ಯೂನತೆಗಳು ಕಂಡುಬಂದಿದ್ದು. ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ದೆಹಲಿ ಪೊಲೀಸರು ಮಿಕಾಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT