ದೇಶ

ದೆಹಲಿಯಲ್ಲಿ ಡೀಸೆಲ್ ವಾಹನಗಳ ನಿಷೇಧಕ್ಕೆ 2 ವಾರ ತಡೆ

Lingaraj Badiger

ನವದೆಹಲಿ: ದೆಹಲಿ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಶಕರಣ(ಎಲ್‌ಜಿಟಿ), ತಾನೇ ನೀಡಿದ್ದ ದೆಹೆಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ನಿಷೇಧ ಆದೇಶಕ್ಕೆ ಸೋಮವಾರ ತಡೆ ನೀಡಿದೆ.

'ಎರಡು ವಾರಗಳ ಕಾಲ ಮಾತ್ರ ವಾಹನಗಳ ಮುಟ್ಟುಗೋಲು ಹಾಕುವುದಿಲ್ಲ. ಕೇವಲ ಎರಡು ವಾರಗಳ ಕಾಲ ಮಾತ್ರ ತಡೆ ನೀಡಲಾಗಿದೆ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ' ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾ.ಸ್ವತಂತ್ರ ಕುಮಾರ್ ಅವರು ಹೇಳಿದ್ದಾರೆ.

ಡೀಸೆಲ್ ವಾಹನಗಳನ್ನು ನಿಷೇಧಿಸುವ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ನ್ಯಾಯಾಧೀಕರಣ ಸೂಚಿಸೆದೆ.

ಡೀಸೆಲ್ ವಾಹನಗಳ ನಿಷೇಧ ಆದೇಶದ ವಿರುದ್ಧ ದೆಹಲಿ ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿದ್ದ ಝುಬೇದಿಯಾ ಬೇಗಂ ಅವರು, ನ್ಯಾಯಾಧೀಕರಣದ ಆದೇಶ ಜಾರಿಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಳೆದ ಏಪ್ರಿಲ್ 7ರಂದು 10 ವರ್ಷ ಹಳೆಯದಾದ ಎಲ್ಲಾ ರೀತಿಯ ಡೀಸೆಲ್ ವಾಹನಗಳನ್ನು ನಿಷೇಧಿಸಬೇಕು ಎಂದು ಆದೇಶಿಸಿತ್ತು.

SCROLL FOR NEXT