ದೇಶ

ಕ್ಯಾಲಿ ಫೋರ್ನಿಯಾದಿಂದ ನೀರಿಗಾಗಿ ಸಮುದ್ರದತ್ತ ಕಣ್ಣು

ಕಾರ್ಲ್ಸ್ ಬ್ಯಾಡ್: ಕಳೆದ ಕೆಲ ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗುತ್ತಿರುವ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯವು ಈಗ ಜೀವಜಲಕ್ಕಾಗಿ ಸಮುದ್ರದತ್ತ ಮುಖಮಮಾಡಿದೆ. ಸಮುದ್ರ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಸುವ ಭಗೀರಥ ಪ್ರಯತ್ನ ಆರಂಭಿಸಿದೆ.

ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವ ಈ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗಗಳೇ ಇಲ್ಲದಂತಾಗಿದೆ. ಹಾಗಾಗಿ ಅನಿವಾರ್ಯವಾಗಿ ರಾಜ್ಯವು ಸಮುದ್ರ ನೀರನ್ನೇ ಬಳಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸಮುದ್ರದ ನೀರಿನಿಂದ ಉಪ್ಪು ತೆಗೆಯುವ ಸ್ಥಾವರಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಲು ನಿರ್ಧರಿಸಿದೆ. ಆದರೆ, ಈ ಘಟಕಗಳು ದುಬಾರಿ ಮಾತ್ರವಲ್ಲ. ಪರಿಸರಕ್ಕೂ ಹೆಚ್ಚು ಹಾನಿಆಗಲಿದೆ. ಹಾಗಾಗಿ ಅನೇಕ ಪರಿಸರ ಪರ ಸಂಘಟನೆಗಳು, ವಿಜ್ಞಾನಿಗಳು ಈ ರೀತಿಯ ಸ್ಥಾವರ ಆರಂಭಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಮುಂದಿನ ವರ್ಷ ಮಳೆಯ ಸಮಸ್ಯೆ ನಿವಾರಣೆಯಾದರೆ ಈ ದುಬಾರಿ ವೆಚ್ಚದ ಸ್ಥಾವರಗಳು ಬಿಳಿಯಾನೆಯಂತಾಗಲಿವೆ ಎನ್ನುವುದು ಕೆಲವರ ವಾದ.

ವಿಜ್ಞಾನಿಗಳ ಪ್ರಕಾರ, ಇಂಥ ಸ್ಥಾವರಗಳಿಂದ ಎಷ್ಟು ಅನುಕೂಲ ಆಗುತ್ತದೆಯೋ ಅಷ್ಟೇ ಅನಾನುಕೂಲ ಕೂಡ ಇದೆ. ಇದು ಸಮುದ್ರ ಜೀವಿಗಳ ಮೇಲೆ ನೇರ ಪರಿಣಾಮ ಬೀರಲಿದೆ. ವಾತಾವರಣಕ್ಕೆ ಹೆಚ್ಚಿನ ಕಾರ್ಬನ್ ಅನ್ನು ಬಿಡುಗಡೆ ಮಾಡಲಿದೆ.

SCROLL FOR NEXT