ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ 
ದೇಶ

ಅಪಹರಣಕ್ಕೊಳಗಾದ ಬಾಲಕಿಯರು ಸಿಗುತ್ತಾರೆಂದು ಪ್ರಮಾಣ ಮಾಡುವುದಿಲ್ಲ: ನೈಜೀರಿಯಾ ಅಧ್ಯಕ್ಷ

ಬೋಕೋ ಹರಮ್ ಎಂಬ ಉಗ್ರ ಸಂಘಟನೆಯಿಂದ ಅಪಹರಣಕ್ಕೊಳಗಾದ ಹೆಣ್ಣುಮಕ್ಕಳನ್ನು ಹುಡುಕಿಕೊಡಲಾಗುತ್ತದೆ ಎಂದು ನಾನು ಪ್ರಮಾಣ ಮಾಡಲು ಸಾಧ್ಯವಿಲ್ಲ ಎಂದು ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ...

ನೈಜೀರಿಯಾ: ಬೋಕೋ ಹರಮ್ ಎಂಬ ಉಗ್ರ ಸಂಘಟನೆಯಿಂದ ಅಪಹರಣಕ್ಕೊಳಗಾದ ಹೆಣ್ಣುಮಕ್ಕಳನ್ನು ಹುಡುಕಿಕೊಡಲಾಗುತ್ತದೆ ಎಂದು ನಾನು ಪ್ರಮಾಣ ಮಾಡಲು ಸಾಧ್ಯವಿಲ್ಲ ಎಂದು ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ ಸೋಮವಾರ ಹೇಳಿದ್ದಾರೆ.

ನೈಜೀರಿಯಾ ದೇಶದ ಈಶಾನ್ಯ ಭಾಗದಲ್ಲಿರುವ ಚಿಬಕ್ ಪಟ್ಟಣದ ಶಾಲೆಯೊಂದರ ಮೇಲೆ ದಾಳಿ ಮಾಡಿದ ಬೊಕೋ ಹರಮ್ ಎಂಬ ಉಗ್ರ ಸಂಘಟನೆಯು ಶಾಲೆಯಲ್ಲಿದ್ದ ಸುಮಾರು 219 ಹೆಣ್ಣು ಮಕ್ಕಳನ್ನು ಅಪಹರಿಸಿತ್ತು. ಈ ಘಟನೆ ನಡೆದು ಇಂದಿಗೆ 1 ವರ್ಷ ಕಳೆದಿದೆ ಆದರೂ ಅಪಹರಕ್ಕೊಳಗಾದ ಬಾಲಕಿಯರ ಪತ್ತೆ ಈ ವರೆಗೂ ಸಾಧ್ಯವಾಗಿಲ್ಲ. ಅಪಹರಣಕ್ಕೊಳಗಾದ ಬಾಲಕಿಯರ ಪತ್ತೆಗಾಗಿ ಅಲ್ಲಿನ ಅಧಿಕಾರಿಗಳು ಇಂದಿಗೂ ಹರಸಾಹಸ ಪಡುತ್ತಿದ್ದಾರಾದರೂ ಈವರೆಗೂ ಯಾವುದೇ ಸುಳಿವುಗಳು ಸಿಕ್ಕಿಲ್ಲ.

ಈ ಘಟನೆ ಕುರಿತಂತೆ ಮಾತನಾಡಿರುವ ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ ಅವರು, ಅಪಹರಣಕ್ಕೊಳಗಾದ ಬಾಲಕಿಯರ ರಕ್ಷಣೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಆದರೂ ಈ ವರೆಗೂ ಯಾವುದೇ ಸುಳಿವುಗಳು ಸಿಕ್ಕಿಲ್ಲ. ಆದ್ದರಿಂದ ಬಾಲಕಿಯರನ್ನು ರಕ್ಷಿಸಿ ಮರಳಿ ಪೋಷಕರಿಗೆ ನೀಡುವ ಕುರಿತು ಪ್ರಮಾಣ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಪಹರಣಕ್ಕೊಳಗಾದ ಬಾಲಕಿಯರ ರಕ್ಷಿಸಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತದೆ ಎಂಬ ಧೈರ್ಯವಂತೂ ಅಪಹರಣಕ್ಕೊಳಗಾದ ಬಾಲಕಿಯರ ಪೋಷಕರು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನೀಡಬಲ್ಲೆ ಎಂದು ಮುಹಮದ್ ಬುಹಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

SCROLL FOR NEXT