ಬರ್ಲಿನ್: ನೊಬೆಲ್ ಪ್ರಶಸ್ತಿ ವಿಜೇತ, ನಾಝಿಗಳ ದೌರ್ಜನ್ಯದಿಂದ ಕಂಗೆಟ್ಟಿದ್ದ ಜನರ ಧ್ವನಿಯಾಗಿದ್ದ ಜರ್ಮನಿಯ ಲೇಖಕ ಗಂಥರ್ ಗ್ರಾಸ್(87) ಸೋಮವಾರ ನಿಧನ ರಾಗಿದ್ದಾರೆ.
ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಗಂಥರ್ ಗ್ರಾಸ್ ಅವರು ಲ್ಯುಬೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಉಸಿರಾಟಕ್ಕೆ ತೀವ್ರವಾಗಿ ತೊಂದರೆಯುಂಟಾದ ಕಾರಣ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗಂಥರ್ ಗ್ರಾಸ್ ಅವರು ತಮ್ಮ 17 ವಯಸ್ಸಿನಲ್ಲಿಯೇ ಎರಡನೇ ಮಹಾಯುದ್ಧದ ಭೀಕರ ದೃಶ್ಯಗಳನ್ನು ನೋಡಿದ್ದರು. ಅಂದು ಗಂಥರ್ ಗ್ರಾಸ್ ಹಿಟ್ಲರ್ ಅವರ ಯುವ ಪಡೆಯ ಸದಸ್ಯರಾಗಿದ್ದರು. ತದನಂತರ ನಾಡಿ ವಿಶೇಷ ಪಡೆಗಳ ಘಟಕ ಸೇರಿದ್ದರು. 1999ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಗಂಥರ್ ಅವರು, 1959ರಲ್ಲಿ ಬರೆದ `ದಿ ಟಿನ್ ಟ್ರಮ್' ಕೃತಿ ಅವರಿಗೆ ಸಾಕಷ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಕ್ಯಾಟ್ ಆ್ಯಂಡ್ ಮೌಸ್, ಡಾಗ್ ಇಯರ್ಸ್ ಅವರ ಇತರ ಪ್ರಸಿದ್ಧ ಕೃತಿಗಳು.