ದೇಶ

ಅಲ್ಪಸಂಖ್ಯಾತರ ಸಂತಾನಹರಣ ವಿವಾದ: ಸಾಧ್ವಿ ದೇವಾ ಠಾಕೂರ್ ಹೇಳಿಕೆಗೆ ಶಿವಸೇನೆ ಸಮರ್ಥನೆ

Vishwanath S

ಮುಂಬೈ: ಕಡ್ಡಾಯವಾಗಿ ಅಲ್ಪಸಂಖ್ಯಾತರನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಬೇಕು ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಹಿಂದು ಪರಿಷತ್‌ ನಾಯಕಿ ಸಾಧ್ವಿ ದೇವಾ ಠಾಕೂರ್‌ ಅವರ ಹೇಳಿಕೆಯನ್ನು ಬುಧವಾರ ಶಿವಸೇನೆ ಸಮರ್ಥಿಸಿಕೊಂಡಿದೆ.

ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂರು ಹಾಗೂ ಕ್ರಿಶ್ಚಿಯನ್ ರ ಜನಸಂಖ್ಯೆ ಹೆಚ್ಚುತ್ತಿದ್ದು, ಆ ಜನಾಂಗದ ಜನಸಂಖ್ಯೆ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ ಗೆ ಒಳಪಡಿಸಬೇಕು ಎಂದು ಸಾಧ್ವಿ ದೇವಾ ಠಾಕೂರ್ ಹೇಳಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದು ಹಿಂದುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದರು. ಅಲ್ಲದೇ ಹೆಚ್ಚು ಮಕ್ಕಳನ್ನು ಹೆರುವ ಅಲ್ಪಸಂಖ್ಯಾತ ವರ್ಗದ ಜನಸಂಖ್ಯೆ ನಿಯಂತ್ರಣವಾಗಬೇಕಾದರೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಹೇರಬೇಕು. ಅವರನ್ನೂ ಸಂತಾನಹರಣ ಚಿಕಿತ್ಸೆಗೆ ಒಳಪಡಿಸುವುದರಿಂದ ಜನಸಂಖ್ಯೆ ಏರಿಕೆಯನ್ನು ತಡೆಯಬಹುದು ಎಂದು ಹೇಳಿದ್ದರು.


SCROLL FOR NEXT