ನವದೆಹಲಿ: ಐಜಿಐ ವಿಮಾನನಿಲ್ದಾಣದ ಬಳಿ ಸುಮಾರು ರು,65 ಕೋಟಿ ಮೌಲ್ಯದ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೆರು ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ 1,300 ಗ್ರಾಂ ಇದ್ದ ಕೊಕೇನ್ ನ್ನು ಉಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿಯನ್ನು ಲೊಪೇಜ್ ರಿಯಾಸ್ ಎಂದು ಗುರುತಿಸಲಾಗಿದ್ದು ಆತ ದುಬೈ ಮೂಲಕ ಸಾವ್ ಪಾಲೊಯಿಂದ ಭಾರತಕ್ಕೆ ಆಗಮಿಸಿದ್ದ ಎನ್ನಲಾಗಿದೆ.
ಇಲ್ಲಿಯವರೆಗೆ ಸಿಕ್ಕಿದ್ದ ಅತ್ಯಂತ ಶುದ್ಧ ಹಾಗೂ ದೊಡ್ಡ ಮಟ್ಟದ ಕೊಕೇನ್ ಎನ್ನಲಾಗಿದೆ. ಆತನ ಮೇಲೆ ಪ್ರಕರಣ ದಾಖಲಿಸಿಲಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.